ತುಮಕೂರು: ರಾಜ್ಯದಲ್ಲಿ ಬಿಜೆಪಿ ಸರ್ಕಾರವೇ ಇದೆ,ಆಗಿನಿಂದ ಸುಮ್ಮನೆ ಇದ್ದು ಈಗ ರಾಮನಗರದ ರಾಮದೇವರ ಬೆಟ್ಟದಲ್ಲಿ ರಾಮಮಂದಿರ ನಿರ್ಮಾಣ ಮಾಡಲು ಹೊರಟಿರುವ ಉದ್ದೇಶ ಏನು ಎಂದು ಮಾಜಿ ಸಿಎಂ ಎಚ್.ಡಿ.ಕುಮಾರಸ್ವಾಮಿ ಪ್ರಶ್ನಿಸಿದ್ದಾರೆ.
ಚಿಕ್ಕನಾಯಕನಹಳ್ಳಿಯಲ್ಲಿ ಪಂಚರತ್ನಯಾತ್ರೆ ವೇಳೆ ಮಾಧ್ಯಮ ಪ್ರತಿ ನಿಧಿಗಳೊಂದಿಗೆ ಮಾತನಾಡಿದರು
ಮೂರೂವರೆ ವರ್ಷದಿಂದ ಸುಮ್ಮನೆ ಇದ್ದವರು ಈಗ ದಕ್ಷಿಣ ಭಾರತದಲ್ಲಿ ರಾಮಮಂದಿರ ನಿರ್ಮಾಣ ಮಾಡುತ್ತೇವೆ ಎಂದು ಘೋಷಣೆ ಮಾಡುತ್ತಾರೆ
ಇನ್ನು ಮೂರು ತಿಂಗಳಿಗೆ ಚುನಾವಣೆ ಬರಲಿದೆ ಈವಾಗ ಇಂತಹ ಘೋಷಣೆ ಮಾಡಿದರೆ ಇವರನ್ನೆ ಜನ ಹೊರಗೆ ಇಡೋ ಪ್ರಯತ್ನ ಮಾಡುತ್ತಾರೆ ಎಂದು ಟೀಕಿಸಿದರು.
ನಮ್ಮ ರಾಜ್ಯ ದರಿದ್ರ ರಾಜ್ಯ ಅಲ್ಲ, ಯುಪಿ ಸಿಎಂ ಕರೆತಂದು ಇಲ್ಲಿ ಫೌಂಡೇಶನ್ ಹಾಕುವ ಅವಶ್ಯಕತೆ ಇಲ್ಲ,
ನಮ್ಮ ಸುತ್ತೂರು ಮಠಾಧಿಶರು, ಆದಿಚುಂಚನಗಿರಿ ಶ್ರೀಗಳನ್ನು ಕರೆತಂದು ನಾನೆ ಮಾಡುತ್ತೇನೆ ಎಂದು ಟಾಂಗ್ ನೀಡಿದರು.
ಇವರೇನು ನನ್ನ ಕ್ಷೇತ್ರಕ್ಕೆ ಬಂದು ಮಾಡೊದು ಅಗತ್ಯವಿಲ್ಲ,ನನ್ನ ಕ್ಷೇತ್ರದಲ್ಲಿ ಇವರೇನು ಬಂದು ಕಟ್ಟೊದು ಬೇಕಾಗಿಲ್ಲ
ನಂಗೆ ದೇವರು ಇನ್ನು ಶಕ್ತಿ ಕೊಟ್ಟಿದ್ದಾನೆ.
ಬೇರೆ ರಾಜ್ಯದಿಂದ ಯಾರನ್ನೊ ಕರೆತಂದು ಚುನಾವಣೆ ಸಮಯದಲ್ಲಿ ಇದೆಲ್ಲ ಮಾಡೋದು ಬೇಡ
ಇವರ ಆಟ ಮುಗಿಯುತ್ತಾ ಬಂದಿದೆ, ಇದು ಇವರ ಕೊನೆಯ ಅಧ್ಯಾಯ, ಜನರ ಹಣ ಲೂಟಿ ಹೊಡೆದು ಅದರಿಂದ ನಿರ್ಮಾಣ ಮಾಡ್ತಾರೆ. ರಾಮನಗರದಲ್ಲಿ ಬಿಜೆಪಿಯ ಆಟ ನಡಿಯಲ್ಲ ಎಂದು ಎಚ್ ಡಿ ಕೆ ಗುಡುಗಿದರು.