ಮಂಡ್ಯ: ಹೊಸ ವರ್ಷಾಚರಣೆಗೆ ಮೈಸೂರು ಹಾಗೂ ಮಂಡ್ಯದ ಕಾವೇರಿ ನದಿ ತೀರದಲ್ಲಿ ಮೋಜು-ಮಸ್ತಿಗೆ ಸಂಪೂರ್ಣ ನಿಷೇಧ ಹೇರಲಾಗಿದೆ.
ಮಂಡ್ಯ ಜಿಲ್ಲೆಯ ಶ್ರೀರಂಗಪಟ್ಟಣ ತಾಲೂಕು ವ್ಯಾಪ್ತಿಯ ಬಲಮುರಿ, ಎಡಮುರಿ, ಕೆ.ಆರ್.ಎಸ್ ಹಿನ್ನೀರು ಸೇರಿದಂತೆ ಕಾವೇರಿ ತೀರದಲ್ಲಿ ಈ ಹಿಂದೆ ಮೋಜು-ಮಸ್ತಿಗೆ ಬಂದು ಹಲವರು ಪ್ರಾಣ ಕಳೆದುಕೊಂಡ ಉದಾಹರಣೆ ಇದೆ.
ಆದ್ದರಿಂದ ಹೊಸ ವರ್ಷಾಚರಣೆಗೆ ಕಾವೇರಿ ತೀರದಲ್ಲಿ ಮೋಜು-ಮಸ್ತಿಗೆ ಅವಕಾಶ ನಿರ್ಬಂಧಿಸಲಾಗಿದೆ.
ಶನಿವಾರ ಬೆಳಿಗ್ಗೆ 6 ಗಂಟೆಯಿಂದ ಭಾನುವಾರ ರಾತ್ರಿ 10 ಗಂಟೆ ತನಕ ನಿರ್ಬಂಧ ವಿಧಿಸಿ ಶ್ರೀರಂಗಪಟ್ಟಣ ತಹಶಿಲ್ದಾರ್ ಶ್ವೇತಾ ಎನ್ ರವೀಂದ್ರರಿಂದ ಆದೇಶ ಹೊರಡಿಸಿದ್ದಾರೆ.