ಮುಡಾ ಅಧ್ಯಕ್ಷರಾಗಿ ಹೆಚ್.ವಿ.ರಾಜೀವ ನೇಮಕ

ಮೈಸೂರು: ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷರಾಗಿ ಹೆಚ್.ವಿ.ರಾಜೀವ ಅವರನ್ನು ನೇಮಕ ಮಾಡಲಾಗಿದೆ.
ಮುಂದಿನ ಮೂರು ವರ್ಷದ ಅವಧಿಗೆ ಅಥವಾ ಮುಂದಿನ ಆದೇಶದವರೆಗೆ ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷರನ್ನಾಗಿ ರಾಜ್ಯ ಸರ್ಕಾರದ ನಗರಾಭಿವೃದ್ಧಿ ಇಲಾಖೆಯ ಅಧೀನ ಕಾರ್ಯದರ್ಶಿ ಸಿ.ಎಸ್.ಶಿವಕುಮಾರಸ್ವಾಮಿ ಆದೇಶ ಹೊರಡಿಸಿದ್ದಾರೆ.
ಮುಡಾದ ಅದೇಷ್ಟೋ ಕೆಲಸ ಕಾರ್ಯಗಳು ಬಾಕಿ ಉಳಿದಿತ್ತು. ಇದೀಗ ಅಧ್ಯಕ್ಷರ ನೇಮಕದಿಂದ ಪ್ರಾಧಿಕಾರದ ಕಾರ್ಯ ಚುರುಕುನಿಂದ ನಡೆಯುವ ನಿರೀಕ್ಷೆ ಇದೆ.
ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರಕ್ಕೆ ಅಧ್ಯಕ್ಷರಿಲ್ಲದೆ ಒಂದೂವರೆ ವರ್ಷವೇ ಕಳೆದಿದೆ.