ಬ್ಯೂಟಿಷಿಯನ್  ಸೇರಿ ಮೂವರು ಕತರ್ನಾಕ್ ಕಳ್ಳಿಯರ ಬಂಧನ

ಮೈಸೂರು: ಸ್ಕೂಟರ್ ರೈಡಿಂಗ್ ತರಬೇತಿ ನೀಡುವ ನೆಪದಲ್ಲಿ ಚಿನ್ನಾಭರಣ ದೋಚಿದ ಮೂವರು ಖತರ್ ನಾಕ್ ಕಳ್ಳಿಯರನ್ನು ಮೈಸೂರು ಕುವೆಂಪುನಗರ ಠಾಣೆ ಪೊಲೀಸರು ಬಂಧಿಸಿದ್ದಾರೆ.

ಅಮೃತ (38), ಅಶ್ವಿನಿ (28) ಹಾಗೂ ಶೃತಿ (26) ಬಂಧಿತ ಆರೋಪಿಗಳು.

ಆರೋಪಿಗಳಿಂದ 7.5 ಲಕ್ಷ ಮೌಲ್ಯದ 150 ಗ್ರಾಂ ಚಿನ್ನಾಭರಣ,12 ಸಾವಿರ ರೂ,ಕೃತ್ಯಕ್ಕೆ ಬಳಸಿದ ಸ್ಕೂಟರ್ ಹಾಗೂ ಮೂರು ಮೊಬೈಲ್ ಗಳನ್ನ ಪೊಲೀಸರು ವಶಪಡಿಸಿಕೊಂಡಿದ್ದಾರೆ.

ಕುವೆಂಪುನಗರದ ಬಿ ಬ್ಲಾಕ್ ನಿವಾಸಿ ಪೂರ್ಣಿಮ ತಮ್ಮ ಮಗಳ ಮದುವೆಗಾಗಿ 150 ಗ್ರಾಂ ಚಿನ್ನಾಭರಣ,20 ಸಾವಿರ ನಗದು ಇಟ್ಟಿದ್ದರು.

ಪ್ರತಿದಿನ ಸ್ಕೂಟರ್ ರೈಡಿಂಗ್ ಕಲಿಯಲು ಮೊದಲ ಆರೋಪಿ ಅಮೃತ ಬಳಿ ಹೋಗುತ್ತಿದ್ದರು.

ಅಮೃತ ಮನೆಗೇ ಬಂದು ಪೂರ್ಣಿಮಾರನ್ನ ಪಿಕ್ ಮಾಡುತ್ತಿದ್ದರು.ಮನೆಯಲ್ಲಿ ಒಡವೆಗಳು ಇರುವುದನ್ನ ಪತ್ತೆಹಚ್ಚಿದ ಅಮೃತ ತನ್ನ ಸ್ನೇಹಿತೆಯರೊಂದಿಗೆ ಚಿನ್ನಾಭರಣ ದೋಚಲು ಸಂಚು ರೂಪಿಸಿದ್ದಳು.

ಬ್ಯೂಟಿಷಿಯನ್ ಅಶ್ವಿನಿ ಹಾಗೂ ಮನೆಗೆಲಸ ಮಾಡುವ ಶೃತಿ ಜೊತೆ ಸೇರಿಕೊಂಡು ನಕಲಿ ಬೀಗ ಸಿದ್ದಪಡಿಸಿ ಡಿಸೆಂಬರ್ 31 ರಂದು 150 ಗ್ರಾಂ ಚಿನ್ನ ಹಾಗೂ 12 ಸಾವಿರ ನಗದು ಕಳುವು ಮಾಡಿದ್ದಾರೆ.

ಪೂರ್ಣಿಮ ರವರು ಕುವೆಂಪುನಗರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.

ಡಿಸಿಪಿ ಎಂ.ಎಸ್.ಗೀತಾ  ಮಾರ್ಗದರ್ಶನದಲ್ಲಿ,ಎಸಿಪಿ ಗಂಗಾಧರಸ್ವಾಮಿ ಉಸ್ತುವಾರಿ, ಕುವೆಂಪುನಗರ ಠಾಣೆ ಇನ್ಸ್ಪೆಕ್ಟರ್ ಅರುಣ್ ರವರ ನೇತೃತ್ವದಲ್ಲಿ ಪಿಎಸ್ಸೈ ರಾಧಾ,ಎಎಸ್ಸೈ ಮಹದೇವ ಹಾಗೂ ಸಿಬ್ಬಂದಿ ಮಂಜುನಾಥ್,ಪುಟ್ಟಪ್ಪ,ನಾಗೇಶ್,ಯೋಗೇಶ್,ಹಜರತ್,ಸುರೇಶ್,ಮಾದೇಶ,ಮಹಿಳಾ ಸಿಬ್ಬಂದಿಗಳಾದ ಮಂಜುಳಾ,ಅಭಿಲಾಷ,ಅಶ್ವಿನಿ,ಕೃಷ್ಣವೇಣಿ,ಸೌಭಾಗ್ಯ ರವರು ಆರೋಪಿಗಳನ್ನ ಬಂದಿಸುವಲ್ಲಿ ಯಶಸ್ವಿಯಾಗಿದ್ದಾರೆ.

ಕುವೆಂಪುನಗರ ಠಾಣೆ ಪೊಲೀಸರ ಕಾರ್ಯವನ್ನ ನಗರ ಪೊಲೀಸ್ ಆಯುಕ್ತ ಬಿ.ರಮೇಶ್,ಹಾಗೂ ಡಿಸಿಪಿ ಮುತ್ತುರಾಜ್ ಪ್ರಶಂಸಿಸಿದ್ದಾರೆ.