ಮೈಸೂರು: ನಗರದ ಸಯ್ಯಾಜಿರಾವ್ ರಸ್ತೆಯಲ್ಲಿರುವ ಸತ್ಯನಾರಾಯಣ ಸ್ವಾಮಿ ದೇವಾಲಯದ ಬಾಗಿಲು ಮುರಿದು ಒಳನುಗ್ಗಿರುವ ಕಳ್ಳರು ಹುಂಡಿಯನ್ನು ದೋಚಿದ್ದಾರೆ.
ದೇವಾಲಯದಲ್ಲಿ ಇಟ್ಟಿರುವ ಹುಂಡಿಯನ್ನು ಕಳ್ಳರು ಹೊಡೆದು ಹಣ ದೋಚಿದ್ದಾರೆ.
ದೇವಾಲಯಕ್ಕೆ ಬೆಳಗ್ಗೆ ಮಂಡಿ ಠಾಣೆ ಪೊಲೀಸರು ಹಾಗೂ ಬೆರಳಚ್ಚು ತಜ್ಞರು ಭೇಟಿ ನೀಡಿ ಪರಿಶೀಲನೆ ನಡೆಸಿದರು.
ಕಳೆದ ಎಂಟು ವರ್ಷದಿಂದ ಆಡಳಿತ ಮಂಡಳಿ ಹುಂಡಿ ಏಣಿಕೆ ಮಾಡಿಲ್ಲದ ಕಾರಣ
ಅಪಾರ ಮೊತ್ತದ ಹಣ ಕಳುವಾಗಿದೆ.
ಮಂಡಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು ಪೊಲೀಸರು ತನಿಖೆ ಕೈಗೊಂಡಿದ್ದಾರೆ.