ಉಡುಪಿ: ಜಿಲ್ಲೆಯ ಕಾಪು ತಾಲೂಕು ಪಡುಬಿದ್ರಿಯಲ್ಲಿ ಕಾಂತಾರ ಚಿತ್ರದ ಮಾದರಿಯಲ್ಲಿ ಘಟನೆಯೊಂದು ನಡೆದಿದ್ದು ಎಲ್ಲರಲ್ಲೂ ಅಚ್ಚರಿ ಹಾಗೂ ಆತಂಕ ಮೂಡಿಸಿದೆ.
ಪಡುಹಿತ್ಲು ಜಾರಂದಾಯ ದೈವಸ್ಥಾನದ ನೇಮೋತ್ಸವ ವಿಚಾರದಲ್ಲಿ ತಗಾದೆ ಇತ್ತು.
500 ವರ್ಷ ಇತಿಹಾಸ ಇರುವ ಈ ದೇವಸ್ಥಾನದಲ್ಲಿ ಸಮಸ್ತರ ಪರವಾಗಿ ಒಂದು ಭಕ್ತ ಸಮಿತಿ ಇದೆ.
ದೈವಸ್ಥಾನಕ್ಕೆ ಸಂಬಂಧಿಸಿದಂತೆ ಭಕ್ತರ ಗುಂಪೊಂದು ಟ್ರಸ್ಟ್ ರಚನೆ ಮಾಡಿದೆ, ನಮ್ಮ ಟ್ರಸ್ಟ್ ನೇತೃತ್ವದಲ್ಲಿ ನೇಮೋತ್ಸವ ನಡೆಯುತ್ತದೆ ಎಂದು ಘೋಷಿಸಿದೆ.
ಭಕ್ತ ಸಮಿತಿ ಮತ್ತು ಟ್ರಸ್ಟ್ ಕೋರ್ಟ್ ಮೆಟ್ಟಿಲೇರಿದೆ. ಈ ನಡುವೆ ಓರ್ವ ಟ್ರಸ್ಟಿ ಜಯ ಪೂಜಾರಿ ಕೋರ್ಟ್ ಮೆಟ್ಟಿಲೇರಿದ ಮರುದಿನವೇ ಸಾವನ್ನಪ್ಪಿದ್ದಾರೆ.
ಇದು ನಮ್ಮ ಜಾರಂದಾಯ ದೈವದ ಶಕ್ತಿ ಕಾರಣಿಕ ಎಂದು ಊರವರು ಹೇಳುತ್ತಿದ್ದಾರೆ.
ಪ್ರಕಾಶ್ ಶೆಟ್ಟಿ ಟ್ರಸ್ಟ್ ರಚನೆಗೆ ಮುಂದಾಳತ್ವ ವಹಿಸಿದವರು ಎಂದು ಗ್ರಾಮಸ್ಥರು ದೂರಿದ್ದಾರೆ.
ಈ ನಡುವೆ ಪ್ರಾಣಹಾನಿಯಾದ ಕಾರಣ ವಾರ್ಷಿಕ ನೇಮೋತ್ಸವವನ್ನು ಮುಂದೂಡಲಾಗಿದೆ.