ಡ್ರಗ್ಸ್ ದಂಧೆ: ಕೆಎಂಸಿ ಆಸ್ಪತ್ರೆ ವೈದ್ಯರ ವಜಾ

ಮಂಗಳೂರು: ವೈದ್ಯರ ಡ್ರಗ್ಸ್ ಜಾಲ ಪ್ರಕರಣದಲ್ಲಿ ಸಿಕ್ಕಿಬಿದ್ದ ಇಬ್ಬರು ವೈದ್ಯರನ್ನು ವಜಾಗೊಳಿಸಿ 7 ಮಂದಿ ವೈದ್ಯಕೀಯ ವಿದ್ಯಾರ್ಥಿಗಳನ್ನು ಕೆಎಂಸಿ ಆಸ್ಪತ್ರೆಯ  ಆಡಳಿತ ಮಂಡಳಿ ಅಮಾನತು ಮಾಡಿದೆ.

ಅತ್ತಾವರ ಕೆಎಂಸಿ ಆಸ್ಪತ್ರೆಯ ಮೆಡಿಕಲ್ ಆಫೀಸರ್ ಡಾ. ಸಮೀರ್, ಮೆಡಿಕಲ್ ಸರ್ಜನ್ ಡಾ. ಮಣಿಮಾರನ್ ಮುತ್ತು ವಜಾಗೊಂಡಿರುವ ವೈದ್ಯರು.

ಡಾ. ಕಿಶೋರಿಲಾಲ್, ಡಾ. ನದೀಯಾ ಸಿರಾಜ್, ಡಾ. ವರ್ಷಿಣಿ ಪತ್ರಿ, ಡಾ. ರಿಯಾ ಚಡ್ಡ, ಡಾ. ಇರಾ ಬಾಸಿನ, ಡಾ. ಕ್ಷಿತಿಜ್ ಗುಪ್ತಾ, ಡಾ. ಹರ್ಷ ಕುಮಾರ್ ವಿ.ಎಸ್. ಅಮಾನತು ಆಗಿರುವ ವೈದ್ಯಕೀಯ ವಿದ್ಯಾರ್ಥಿಗಳು ಅಮಾನತುಗೊಂಡಿದ್ದಾರೆ.

ಮಂಗಳೂರಿನಲ್ಲಿ ಪ್ರತಿಷ್ಠಿತ ವೈದ್ಯಕೀಯ ಕಾಲೇಜುಗಳ ವೈದ್ಯರು ಹಾಗೂ ವೈದ್ಯಕೀಯ ವಿದ್ಯಾರ್ಥಿಗಳ ಗಾಂಜಾ ದಂಧೆ ಹಾಗೂ ಗಾಂಜಾ ಸೇವನೆ ಪ್ರಕರಣ ಭಾರೀ ಸಂಚಲನ ಸೃಷ್ಟಿಸಿತ್ತು.

ಇದೀಗ ಕೆಎಂಸಿ ಆಸ್ಪತ್ರೆ ಆಡಳಿತ ಮಂಡಳಿ ಇಬ್ಬರು ವೈದ್ಯರನ್ನು ವಜಾ ಮಾಡಿ ಅವರ ಗುತ್ತಿಗೆ ರದ್ದುಪಡಿಸಿದೆ.

ಅದೇ ರೀತಿ ವೈದ್ಯಕೀಯ ವಿದ್ಯಾರ್ಥಿಗಳ ವಿರುದ್ಧ ಶಿಸ್ತು ಕ್ರಮ ಕೈಗೊಂಡು ಆಸ್ಪತ್ರೆಯಿಂದ ಅಮಾನತು ಮಾಡಲಾಗಿದೆ.