ಕ್ಲೇಮ್ ಕಮಿಷನರ್ ನೇಮಕ: ಉಪ್ಪು ತಿಂದವರು ನೀರು ಕುಡಿಯಲೇಬೇಕು -ಡಾ. ಸುಧಾಕರ್

ಬೆಂಗಳೂರು: ಉಪ್ಪು ತಿಂದವರು ನೀರು ಕುಡಿಯಲೇಬೇಕು ಎಂದು ಸಚಿವ ಡಾ. ಸುಧಾಕರ್ ಅವರು ಟ್ವೀಟ್ ಮಾಡಿದ್ದಾರೆ.
ಕ್ಲೇಮ್ ಕಮಿಷನರ್ ಆಗಿ ಹೈಕೋರ್ಟ್ ನಿವೃತ್ತ ನ್ಯಾಯಮೂರ್ತಿಗಳಾದ ಜಸ್ಟಿಸ್ ಎಚ್.ಎಸ್. ಕೆಂಪಣ್ಣ ಅವರನ್ನು ನೇಮಕ ಮಾಡಲಾಗಿದೆ.
ಇದಕ್ಕೆ ಡಾ. ಸುಧಾಕರ್ ಅವರು ಪ್ರತಿಕ್ರಿಯಿಸಿ ಟ್ವೀಟ್ ಮಾಡಿದ್ದಾರೆ.
ಹೈಕೋರ್ಟ್ ನಿವೃತ್ತ ನ್ಯಾಯಮೂರ್ತಿಗಳಾದ ಜಸ್ಟಿಸ್ ಶ್ರೀ ಎಚ್.ಎಸ್. ಕೆಂಪಣ್ಣ ಅವರು ಬೆಂಗಳೊರು ಗಲಭೆ ಪ್ರಕರಣದಲ್ಲಿ ಕ್ಲೇಮ್ ಕಮಿಷನರ್ ಆಗಿ ನೇಮಕಗೊಂಡಿದ್ದಾರೆ. ಗಲಭೆಯಿಂದ ಉಂಟಾದ ಪ್ರತಿಯೊಂದು ಪೈಸೆಯ ನಷ್ಟವನ್ನೂ ಕಿಡಿಗೇಡಿಗಳಿಂದ ವಸೂಲಿ ಮಾಡುವುದು ನಿಶ್ಚಿತ. ಉಪ್ಪು ತಿಂದವರು ನೀರು ಕುಡಿಯಲೇಬೇಕು.
ಹೀಗೆಂದು ಡಾ. ಸುಧಾಕರ್ ಟ್ವೀಟ್ ಮಾಡಿದ್ದಾರೆ.