(ವರದಿ:ರಾಮಸಮುದ್ರ ಎಸ್.ವೀರಭದ್ರಸ್ವಾಮಿ)
ಚಾಮರಾಜನಗರ : ಇಲಾಖಾವಾರು ಕೆಲ ಸಿಬ್ಬಂದಿಗಳ ವರ್ಗಾವಣೆ ನಡೆದ ಹಿನ್ನಲೆಯಲ್ಲಿ ಬೇಸತ್ತು ಆರಕ್ಷಕ ಪೇದೆಯೊಬ್ಬರು ಜಿಲ್ಲಾ ಪೊಲೀಸ್ ಕಚೇರಿ ಆವರಣದಲ್ಲೇ ಆತ್ಮಹತ್ಯೆಗೆ ಯತ್ನಿಸಿದ ಘಟನೆ ತಡರಾತ್ರಿ ನಡೆದಿದೆ.
ಚಾಮರಾಜನಗರ ಗ್ರಾಮಾಂತರ ಠಾಣೆಯಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದ ಮಹೇಶ್ ಆತ್ಮಹತ್ಯೆಗೆ ಯತ್ನಿಸಿದವರು.
ಆಡಳಿತಾತ್ಮಕ ದೃಷ್ಟಿಯಿಂದ ಅವರನ್ನು ಗ್ರಾಮಾಂತರದಿಂದ ಹನೂರು ಠಾಣೆಗೆ ವರ್ಗಾವಣೆ ಮಾಡಿ ನಿನ್ನೆಯಷ್ಟೆ ಆದೇಶ ಹೊರಡಿಸಲಾಗಿತ್ತು.
ತಡರಾತ್ರಿ ೧೦.೪೫ ರ ಸಮಯದಲ್ಲಿ ಸೀಮೆ ಎಣ್ಣೆ ಸುರಿದುಕೊಂಡು ಚಾಮರಾಜನಗರ ಜಿಲ್ಲಾ ಪೊಲೀಸ್ ಕಚೇರಿಯ ಆವರಣದಲ್ಲೇ ಮಹೇಶ್ ಆತ್ಮಹತ್ಯೆಗೆ ಯತ್ನ ನಢೆಸಿದ್ದಾರೆ.
ಆ ಸಮಯದಲ್ಲಿ ಕಚೇರಿಯಲ್ಲಿ ಎಸ್ಪಿ ಅವರು ಇದ್ದರೋ ಇಲ್ಲವೋ ತಿಳಿಯದು.
ಎಸ್ಪಿ ಇಲ್ಲದ ಸಮಯದಲ್ಲಿ ಇಲಾಖಾ ಆವರಣದಲ್ಲಿ ಆತ್ಮಹತ್ಯೆ ಯತ್ನ ನಡೆಸಿದ್ದೇಕೆ ಎಂಬ ಬಗ್ಗೆ ಸಾಕಷ್ಟು ಅನುಮಾನ ಮೂಡಿಸಿದೆ.ಸರಿಯಾಗಿ ತನಿಖೆ ನಡೆದು ಸತ್ಯ ತಿಳಿಯಬೇಕಿದೆ.