ಚಿಕ್ಕಬಳ್ಳಾಪುರ: ನಮ್ಮ ಸರ್ಕಾರದ ಬಗ್ಗೆ, ನನ್ನ ಇಲಾಖೆ ಬಗ್ಗೆ ಆರೋಪ ಮಾಡಿರುವ ಕಾಂಗ್ರೆಸ್ ದಾಖಲೆ ಕೊಡಲಿ ಎಂದು ಆರೋಗ್ಯ ಸಚಿವ ಡಾ.ಸುಧಾಕರ್ ಒತ್ತಾಯಿಸಿದರು.
ಚಿಕ್ಕಬಳ್ಳಾಪುರ ಪ್ರವಾಸದಲ್ಲಿರುವ ಅವರು ನಿನ್ನೆ ಸಿದ್ದರಾಮಯ್ಯ ಮಾಡಿರುವ ಆರೋಪಗಳಿಗೆ ತಿರುಗೇಟು ನೀಡಿದರು.
ನಮ್ಮ ಕಾಲದಲ್ಲಿ ಭ್ರಷ್ಟಾಚಾರ ನಡೆದಿದ್ದರೆ ದಾಖಲೆ ಕೊಡಿ.ತನಿಖೆ ಆಗಲಿ.ನಿಮ್ಮ ಕಾಲದಲ್ಲಿ ಆಗಿರುವ ಭ್ರಷ್ಟಾಚರದ ಆರೋಪಗಳ ಬಗ್ಗೆಯೂ ತನಿಖೆ ಆಗಲಿ ಎಂದು ಹೇಳಿದರು.
ದಮ್ಮು,ತಾಕತ್ತು ಎಂದೆಲ್ಲಾ ಮಾತನಾಡಿದ್ದಾರೆ.ಇಂತಹ ಪದ ಬಳಕೆ ನಮಗೂ ಬರುತ್ತದೆ.ನಾವೂ ಕೂಡಾ ಒಂದು ಸಾರಿ,ಎರಡು ಸಾರಿ ನೋಡ್ತೀವಿ ನಂತರ ನಾವೂ ಕೂಡಾ ಮಾತನಾಡಿದರೆ ನೀವು ಕೆಳಗೆ ಹೋಗ್ತೀರಿ ಎಂದು ಸಿದ್ದರಾಮಯ್ಯ ಕುರಿತು ವಾಗ್ದಾಳಿ ನಡೆಸಿದರು.
ಸಿದ್ದರಾಮಯ್ಯ ಅವರು ಮುಖ್ಯ ಮಂತ್ರಿಯಾಗಿದ್ದವರು.ಅಂತವರ ಬಾಯಲ್ಲಿ ಕೆಟ್ಟ ಪದಗಳು ಬಂದರೆ ಶೋಭೆ ತರುವುದಿಲ್ಲ ಎಂದು ಟೀಕಿಸಿದರು.
ಮುಖ್ಯ ಮಂತ್ರಿ ಸ್ಥಾನಕ್ಕೆ ಘನತೆ ಇದೆ.ಮನ ಬಂದಂತೆ ಮಾತನಾಡಿ ತಮ್ಮನ್ನು ತಾವೇ ಹಳಿದುಕೊಳ್ಳುತ್ತಿದ್ದಾರೆ ಸಿಎಂ ಆಗಿದಗದವರು ಮುತ್ಸದ್ದಿತನ ಬೆಳೆಸಿಕೊಳ್ಳ ಬೇಕು ಎಂದು ತಿರುಗೇಟು ನೀಡಿದರು.