ಚಾಮರಾಜನಗರ: ಗಡಿ ಜಿಲ್ಲೆಯಾದ ಚಾಮರಾಜನಗರದ ಸರ್ವತೋಮುಖ ಅಭಿವೃದ್ಧಿಗೆ ನಮ್ಮ ಸರ್ಕಾರ ಬದ್ಧವಾಗಿದೆ ಎಂದು ಸಚಿವ ವಿ.ಸೋಮಣ್ಣ ತಿಳಿಸಿದರು.
ಕಳೆದ ಡಿಸೆಂಬರ್ ೧೩ ರಂದು ಮುಖ್ಯ ಮಂತ್ರಿ ಬಸವರಾಜ ಬೊಮ್ಮಾಯಿಯವರು ಜಿಲ್ಲೆಗೆ ಭೇಟಿ ನೀಡಿ, ಒಟ್ಟು ೧೦೯೯ ಕೋಟಿ ದೊಡ್ಡದ ವಿವಿಧ ಅಭಿವೃದ್ಧಿ ಕಾಮಗಾರಿಗಳ ಉದ್ಘಾಟನೆ /ಶಂಕುಸ್ಥಾಪನೆ ಮಾಡಿದ್ದಾರೆ ಎಂದು ಹೇಳಿದರು.
ನಗರದ ಅಂಬೇಡ್ಕರ್ ಕ್ರೀಡಾಂಗಣದಲ್ಲಿ ೭೪ ನೇ ಗಣರಾಜ್ಯೋತ್ಸವದಲ್ಲಿ ಧ್ವಜಾರೋಹಣ ನೆರವೇರಿಸಿ ಮಾತನಾಡಿದರು.
ಸಂವಿಧಾನವನ್ನ ಅಳವಡಿಸಿಕೊಂಡ ಉದ್ದೇಶ ಪ್ರತಿಯೊಬ್ಬ ನಾಗರೀಕನೂ ಮೂಲಭೂತ ಹಕ್ಕುಗಳಾದ ಸ್ವಾತಂತ್ರ್ಯ ಸಮಾನತೆ ದಾರ್ಮಿಕ,ಸಾಂಸ್ಕೃತಿಕ ಶೈಕ್ಷಣಿಕ ಹಾಗೂ ಇತರೆ ಹಕ್ಕುಗಳನ್ನ ನೀಡುವುದಾಗಿದೆ ಎಂದು ತಿಳಿಸಿದರು.
ಬಲಿಷ್ಟ ಸರ್ಕಾರ ರೂಪಿಸುವ ಅತ್ಯುತ್ತಮ ಮಾದರಿ ಸಂವಿದಾನ ಅಳವಡಿಸಿಕೊಂಡಿರುವುದು ನಮ್ಮದೇಶದ ಹೆಮ್ಮೆಯ ಸಂಕೇತ ಎಂದರು.
ಬಾರತ ಸಂವಿದಾನ ಜಗತ್ತಿನ ಅತಿದೊಡ್ಡ ಲಿಖಿತ ಸಂವಿದಾನ. ಡಾ.ಬಿ.ಆರ್. ಅಂಬೇಡ್ಕರ್ ಅವರ ಅವಿರತ ಶ್ರಮದ ಫಲ ಅದಕ್ಕಾಗಿ ನಾವು ಸಂವಿದಾನ ಶಿಲ್ಪಿ ಎಂದು ಸ್ಮರಿಸುತ್ತೇವೆ ಎಂದರು.
150 ಕೆರೆಗಳನ್ನು ಸಮಗ್ರವಾಗಿ ಅಭಿವೃದ್ಧಿಪಡಿಸುವ ನಿಟ್ಟಿನಲ್ಲಿ ಜಿಲ್ಲೆಯ 136 ಗ್ರಾಮ ಪಂಚಾಯತಿಗಳ ಕೆರೆ ಅಭಿವೃದ್ಧಿ ಕಾಮಗಾರಿಗಳು ಪ್ರಗತಿಯಲ್ಲಿವೆ.
ಹರ್ ಘರ್ ತಿರಂಗಾ ಯೋಜನೆಯಡಿ ಜಿಲ್ಲೆಯಲ್ಲಿ 112 ಸ್ವ-ಸಹಾಯ ಸಂಘಗಳ 223 ಮಹಿಳಾ ಸದಸ್ಯರು 130 ಗ್ರಾಮ ಪಂಚಾಯತಿಗಳಿಗೆ ಹಾಗೂ ಸರ್ಕಾರಿ ಕಛೇರಿಗಳಿಗೆ 80,000 ರಾಷ್ಟ್ರಧ್ವಜಗಳನ್ನು ತಯಾರಿಸಿ ಮಾರಾಟ ಮಾಡುವುದರೊಂದಿಗೆ ಮಹಿಳಾ ಸದಸ್ಯರಿಗೆ ಆರ್ಥಿಕ ಸದೃಢತೆ ಸಾಧಿಸಲು ನೆರವಾಗಿದೆ ಎಂದು ಸರ್ಕಾರದ ಯೋಜನೆಗಳನ್ನು ಸೋಮಣ್ಣ ವಿವರಿಸಿದರು.