ವರದಿ:ರಾಮಸಮುದ್ರ ಎಸ್.ವೀರಭದ್ರಸ್ವಾಮಿ
ಚಾಮರಾಜನಗರ: ಜಿಲ್ಲೆಯ ಎಸ್ಪಿಯಾಗಿ ಕರ್ತವ್ಯ ನಿರ್ವಹಿಸುತ್ತಿದ್ದ ಶಿವಕುಮಾರ್ ಅವರನ್ನು ವರ್ಗಾವಣೆ ಮಾಡಲಾಗಿದ್ದು ಅವರ ಸ್ಥಾನಕ್ಕೆ ಪದ್ಮಿನಿ ಸಾಹೋ ಅವರನ್ನು ನೇಮಕ ಮಾಡಲಾಗಿದೆ.
ಈ ಮೂಲಕ ಚಾಮರಾಜನಗರ ಜಿಲ್ಲೆಯ 2ನೇ ಮಹಿಳಾ ಎಸ್ಪಿಯಾಗಿ ಪದ್ಮಿನಿ ಸಾಹೋ ಅವರನ್ನು ನೇಮಿಸಲಾಗಿದೆ.
ಜಿಲ್ಲೆಗೆ ದಿವ್ಯ ಸಾರಾ ಥಾಮಸ್ ಗಿಂತ ಮುಂಚೆ ಮಹಿಳಾ ಎಸ್ಪಿ ಹೆಸರು ಇದ್ದು ನಂತರ ಕ್ಷಣಾರ್ಧದಲ್ಲಿ ಬದಲಾಗಿತ್ತು. ಮೊದಲ ಮಹಿಳಾ ಎಸ್ಪಿಯಾಗಿ ದಿವ್ಯ ಸಾರಾ ಥಾಮಸ್ ಆಡಳಿತ ನಡೆಸಿದರೆ ನಂತರದ ಮಹಿಳಾ ಎಸ್ಪಿಗಳ ಹೆಸರಿನಲ್ಲಿ ಹಾಲಿ ಎಸ್ಪಿ ಪದ್ಮಿನಿ ಸಾಹೊ ಅವರು ಆಡಳಿತ ನಡೆಸಲಿದ್ದು ಎರಡನೆ ಮಹಿಳಾ ಎಸ್ಪಿಯಾಗಿದ್ದಾರೆ.
ಸೋಮವಾರ ಚಾಮರಾಜನಗರ ಜಿಲ್ಲೆ ನೂತನ ಎಸಿ ಆಗಿ ಅಧಿಕಾರ ವಹಿಸಿಕೊಂಡ ಪದ್ಮಿನಿ ಸಾಹೋ ಅವರು ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿ ಕಾನೂನು ಸುವ್ಯವಸ್ಥೆ ಕಾಪಾಡುವುದು ಮುಖ್ಯ ಜವಾಬ್ದಾರಿಯಾಗಿದೆ. ಆಡಳಿತವನ್ನ ಪ್ರಾಮಾಣಿಕವಾಗಿ ನಡೆಸಿಕೊಂಡು ಹೋಗಲಾಗುವುದು ಎಂದರು.