ಸಾಲ ಕೊಡಿಸುವ ನೆಪದಲ್ಲಿ 8.28 ಲಕ್ಷ ರೂ ಗುಳುಂ

ಮೈಸೂರು: ಖಾಸಗಿ ಹಣಕಾಸು ಸಂಸ್ಥೆಯಿಂದ ಸಾಲ ಕೊಡಿಸುವುದಾಗಿ ನಂಬಿಸಿದ ಸೈಬರ್ ವಂಚಕರು ಮಹಿಳೆಯೊಬ್ಬರಿಂದ 8.28 ಲಕ್ಷ ರೂ. ಹಣ ದೋಚಿರುವ ಘಟನೆ ನಗರದಲ್ಲಿ ನಡೆದಿದೆ.

ಮೈಸೂರಿನ ಗೋಕುಲಂ ವಾಸಿ ಮಮತಾ ವಂಚನೆಗೊಳಗಾದ ಮಹಿಳೆ.

ಸಾಲ ನೀಡಲು ನಿರ್ವಹಣಾ ವೆಚ್ಚ, ವಿಮೆ ಹಾಗೂ ಇನ್ನಿತರೆ ಖರ್ಚಾಗುತ್ತದೆ ಎಂದು ಸೈಬರ್ ವಂಚಕರು ಮಮತಾರಿಂದ 8.28ಲಕ್ಷ ರೂ. ಹಣ ಪಡೆದು ವಂಚಿಸಿದ್ದಾರೆ.

ಈ ಬಗ್ಗೆ ಮಮತಾ ಅವರು ನಜರ್ ಬಾದ್‍ನಲ್ಲಿರುವ ಸೈಬರ್ ಮಾದಕ ದ್ರವ್ಯ ಮತ್ತು ಆರ್ಥಿಕ ಅಪರಾಧ ಠಾಣೆಗೆ (ಸೆನ್) ದೂರು ನೀಡಿದ್ದಾರೆ.