ಮೈಸೂರು: ಮೈಸೂರಿನ ಸಿಸಿಬಿ ವಿಶೇಷ ತಂಡ ಕನ್ನ ಕಳ್ಳನೊಬ್ಬನನ್ನು ಬಂಧಿಸಿದ್ದಾರೆ.
ಆರೋಪಿಯು ಮೈಸೂರು, ಬೆಂಗಳೂರು ಸೇರಿದಂತೆ 10 ಕಡೆಗಳಲ್ಲಿ ಕನ್ನಕಳವು ಮಾಡಿದ್ದ ಎಂದು ಪೊಲೀಸರು ತಿಳಿಸಿದ್ದಾರೆ.
ಈತ 45 ಕನ್ನ ಕಳುವು ಪ್ರಕರಣಗಳಲ್ಲಿ ಭಾಗಿಯಾಗಿರುವುದು ವಿಚಾರಣೆ ವೇಳೆ ಗೊತ್ತಾಗಿದೆ.
ಕನ್ನ ಕಳವು ಪ್ರಕರಣ ಹೆಚ್ಚಾದ ಹಿನ್ನಲೆಯಲ್ಲಿ ಸಿಸಿಬಿಯ ವಿಶೇಷ ತಂಡ ರಚಿಸಲಾಗಿತ್ತು.
ಈ ತಂಡ ಎನ್.ಆರ್.ಮೊಹಲ್ಲಾದಲ್ಲಿ ಅನುಮಾನಾಸ್ಪದ ವ್ಯಕ್ತಿಯನ್ನ ವಶಕ್ಕೆ ಪಡೆದು ವಿಚಾರಣೆಗೆ ಒಳಪಡಿಸಿದಾಗ ಆತ ಶೆಟರ್ ಗಳನ್ನ ಮೀಟಿ ಕಳುವು ಮಾಡುತ್ತಿದ್ದುದಾಗಿ ಬಾಯಿಬಿಟ್ಟಿದ್ದಾನೆ.
ಬಂಧಿತನಿಂದ 1,32,850 ನಗದು ಹಾಗೂ ಹಾಲಿನ ಉತ್ಪನ್ನಗಳು, ಕೃತ್ಯಕ್ಕೆ ಬಳಸಿದ ದ್ವಿಚಕ್ರ ವಾಹನವನ್ನೂ ಸಿಸಿಬಿ ಪೊಲೀಸರು ವಶಪಡಿಸಿಕೊಂಡಿದ್ದಾರೆ.
ಹಾಲಿನ ಬೂತ್, ಮೆಡಿಕಲ್ ಶಾಪ್ ಹಾಗೂ ದೇವಸ್ಥಾನಗಳು ಈತನ ಟಾರ್ಗೆಟ್ ಆಗಿದ್ದವು.
ಅಪರಾದ ಮತ್ತು ಸಂಚಾರ ವಿಭಾಗದ ಡಿಸಿಪಿ ಎಸ್.ಜಾಹ್ನವಿ ಮಾರ್ಗದರ್ಶನದಲ್ಲಿ ಸಿಸಿಬಿ ಎಸಿಪಿ ಸಂದೇಶ್ ಕುಮಾರ್ ನೇತೃತ್ವದಲ್ಲಿ ಸಿಸಿಬಿ ಇನ್ಸ್ಪೆಕ್ಟರ್ ಕೃಷ್ಣಕುಮಾರ್ ಹಾಗೂ ಸಿಬ್ಬಂದಿಗಳಾದ ಸಲೀಂಪಾಷ, ಗೋವಿಂದ, ಮಧು, ಗಣೇಶ್, ಉಮಾಮಹೇಶ್ ಹಾಗೂ ಚಿಕ್ಕಣ್ಣ ಕಾರ್ಯಾಚರಣೆ ನಡೆಸಿ ಆರೋಪಿಯನ್ನು ಬಂಧಿಸಿದ್ದಾರೆ.