ಮೈಸೂರು: ಯಾರಿಗಾದರೂ ಬುದ್ದಿವಾದ ಹೇಳೋದಕ್ಕೆ ಹೋಗಬೇಡಿ .ಹೀಗೆ ಹೋದರೆ ಕೊಲೆ ಮಾಡುವಂತಹ ನೀಚ ಜನರಿದ್ದಾರೆ.ಇದಕ್ಕೆ ಇಲ್ಲೊಂದು ಉದಾಹರಣೆ ಇದೆ.
ಹುಡುಗಿಯರನ್ನ ಚುಡಾಯಿಸುತ್ತಿದ್ದ ಯುವಕರಿಗೆ ಬುದ್ಧಿ ಹೇಳಿದ್ದಕ್ಕೆ ಆ ವ್ಯಕ್ತಿಯನ್ನೇ ದುಷ್ಕರ್ಮಿಗಳು ಅಪಹರಿಸಿ ಕೊಲೆ ಮಾಡಿಬಿಟ್ಟಿದ್ದಾರೆ.
ಈ ದುರ್ಘಟನೆ ಮೈಸೂರಿನ ಎನ್.ಆರ್.ಮೊಹಲ್ಲಾ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ.
ಸಯ್ಯದ್ ಮನ್ಸೂರ್ (32) ಕೊಲೆಯಾದ ದುರ್ದೈವಿ.
ನಗರದ ಕಲ್ಯಾಣಗಿರಿ ನಿವಾಸಿ ಮನ್ಸೂರ್ ಕಬಾಬ್ ಸೆಂಟರ್ ಇಟ್ಟುಕೊಂಡು ವ್ಯಾಪಾರ ಮಾಡುತ್ತಿದ್ದರು.
ಭಾನುವಾರ ಮನ್ಸೂರ್ ನಾಪತ್ತೆಯಾಗಿದ್ದರು,ಈ ಸಂಬಂಧ ಎನ್ ಆರ್ ಠಾಣೆಯಲ್ಲಿ ಜಬೀ ಸೈಯದ್ ಝೈನುಲ್ಲಾ ವಿರುದ್ದ ಪ್ರಕರಣ ದಾಖಲಾಗಿತ್ತು.
ಕಬಾಬ್ ಸೆಂಟರ್ ಬಳಿ ಹುಡಗಿಯರನ್ನು ಚುಡಾಯಿಸುತ್ತಿದ್ದರಿಂದ ಜಬೀಗೆ ಮನ್ಸೂರ್ ಬುದ್ದಿವಾದ ಹೇಳಿದ್ದರು.
ಇದರಿಂದ ಕೋಪಗೊಂಡ ಜಬೀ ತನ್ನ ಸ್ನೇಹಿತರ ಜೊತೆ ಬಂದು ಗಲಾಟೆ ಮಾಡಿದ್ದ.ಇದಾದನಂತರ ಮನ್ಸೂರ್ ನಾಪತ್ತೆಯಾಗಿದ್ದರು.
ಮರುದಿನವೇ ಪಾಂಡವಪುರ ನಾಲೆಯಲ್ಲಿ ಮನ್ಸೂರ್ ಶವ ಪತ್ತೆಯಾಗಿದೆ.
ಹಾಗಾಗಿ ಈ ಪ್ರಕರಣ ಸಂಬಂಧ ಇಬ್ಬರನ್ನು ವಶಕ್ಕೆ ಪಡೆದಿರುವ ಎನ್ ಆರ್ ಠಾಣೆ ಪೊಲೀಸರು ತನಿಖೆ ಕೈಗೊಂಡಿದ್ದಾರೆ.
ಜಬೀ,ಝೈನುಲ್ಲಾ ಹಾಗೂ ಮತ್ತಿಬ್ಬರು ಮನ್ಸೂರ್ ನನ್ನು ಅಪಹರಿಸಿ ಕೊಲೆ ಮಾಡಿರುವುದು ವಿಚಾರಣೆ ವೇಳೆ ಗೊತ್ತಾಗಿದೆ.