ಕೇರಳ ಲಾಟರಿ ಮಾರಾಟ:ಇಬ್ಬರ ಬಂದನ.

ಚಾಮರಾಜನಗರ: ಚಾಮರಾಜ ನಗರದಲ್ಲಿ ಕೇರಳ ಲಾಟರಿ ಟಿಕೆಟ್ ಮಾರಾಟ ಮಾಡುತ್ತಿದ್ದ ಇಬ್ಬರು ವ್ಯಕ್ತಿಗಳನ್ನು ಸೆನ್ (cen) ಪೊಲೀಸರು ಬಂಧಿಸಿದ್ದಾರೆ

ಪೊಲೀಸರು ಕಾರ್ಯಾಚರಣೆ ನಡೆಸಿ ಎರಡು ಪ್ರತ್ಯೇಕ ಪ್ರಕರಣಗಳಲ್ಲಿ ಇಬ್ಬರನ್ನು ಬಂಧಿಸಿದ್ದಾರೆ.

ಒಬ್ಬನನ್ನು ಬಂಧಿಸಿ 39120 ರೂ ಮೌಲ್ಯದ 930 ಲಾಟರಿ ಟಿಕೆಟ್ ವಶಪಡಿಸಿಕೊಂಡಿದ್ದಾರೆ.

ಮತ್ತೊಂದು ಪ್ರಕರಣದಲ್ಲಿ ವ್ಯಕ್ತಿಯೊಬ್ಬನನ್ನು ಬಂಧಿಸಿ,14400 ರೂ ಮೌಲ್ಯದ 360 ಲಾಟರಿ ಟಿಕೆಟ್ ಗಳನ್ನು ವಶಕ್ಕೆ ಪಡೆದಿದ್ದಾರೆ.

ಎರಡೂ ಪ್ರಕರಣಗಳಿಂದ ಒಟ್ಟು 53520 ರೂ ಮೌಲ್ಯದ 1290 ಲಾಟರಿ ಟಿಕೆಟ್ ವಶಪಡಿಸಿಕೊಂಡು ಆರೋಪಿಗಳ ವಿರುದ್ಧ ಪೊಲೀಸರು ಕಾನೂನು ಕ್ರಮ ಕೈಗೊಂಡಿದ್ದಾರೆ.

ಕಾರ್ಯಾಚರಣೆಯಲ್ಲಿ ಪಿ ಎಸ್ ಐ ಸಿದ್ದರಾಜು ಸಿಬ್ಬಂದಿಗಳಾದ ರಾಜು,ಜಗದೀಶ, ಮಹಾದೇವಸ್ವಾಮಿ, ಮೋಹನ್, ಚಿಕ್ಕಣ್ಣ, ರಮೇಶ್  ಭಾಗವಹಿಸಿದ್ದರು.