ಕೇಂದ್ರದಿಂದ ಅನ್ ಲಾಕ್ 4.0 ಪ್ರಕಟ

ನವದೆಹಲಿ: ಕೊರೊನಾ ನಡುವೆಯೂ ಸೆ. 1ರಿಂದ ಅನ್ ಲಾಕ್ 4.0 ಮಾರ್ಗಸೂಚಿಯನ್ನು ಕೇಂದ್ರ ಸರ್ಕಾರ ಬಿಡುಗಡೆ ಮಾಡಿದೆ.
ಸೆ. 7ರಿಂದ ಮೆಟ್ರೋ ರೈಲು ಸೇವೆಗೆ ಕೇಂದ್ರ ಅನುಮತಿಸಿದೆ.
ಆನ್ ಲೈನ್ ಶಿಕ್ಷಣ ಮುಂದೂವರಿಕೆ. ಸಭೆ, ಸಮಾರಂಭಗಳಿಗೆ 100 ಜನ ಸೇರಲು ಅವಕಾಶ ನೀಡಲಾಗಿದೆ. ಅಂತಾರಾಜ್ಯ ಸಂಚಾರಕ್ಕೆ ನಿರ್ಬಂಧ ಇಲ್ಲ. ಬಯಲುರಂಗಮಂದಿರಕ್ಕೆ ಅವಕಾಶ ನೀಡಲಾಗಿದೆ. ಕಡ್ಡಾಯವಾಗಿ ಮಾಸ್ಕ್ ಧರಿಸಿ, ಸಾಮಾಜಿಕ ಅಂತರ ಕಾಯ್ದುಕೊಳ್ಳಬೇಕು.
ಸಿನಿಮಾಮಂದಿರ, ಮಲ್ಟಿಪ್ಲೆಕ್ಸ್, ಸ್ವಿಮ್ಮಿಂಗ್ ಪೂಲ್ ಓಪನ್ ಇಲ್ಲ. ಸೆ. 30ರವರೆಗೂ ಶಾಲಾ-ಕಾಲೇಜು ತೆರೆಯುವಂತಿಲ್ಲ. ಅಂತಾರಾಷ್ಟ್ರೀಯ ವಿಮಾನ ಸಂಚಾರಕ್ಕೆ ಅವಕಾಶವಿಲ್ಲ. ಮನರಂಜನಾ ಪಾರ್ಕ್ ತೆರೆಯುವಂತಿಲ್ಲ.
ಕಂಟೈನ್ಮೆಂಟ್ ಝೋನ್ ಗಳಲ್ಲಿ ಮಾತ್ರ ಲಾಕ್ ಡೌನ್ ಗೆ ಅವಕಾಶ ನೀಡಲಾಗಿದೆ.
ರಾಜ್ಯಗಳು ಇನ್ನು ಮುಂದೆ ಲಾಕ್ ಡೌನ್ ಮಾಡುವಂತಿಲ್ಲ.