ಪತ್ರಕರ್ತರೊಂದಿಗೆ ಸಭೆ ನಡೆಸಿದ ಎಸ್ಪಿ

(ವರದಿ:ರಾಮಸಮುದ್ರ ಎಸ್.ವೀರಭದ್ರಸ್ವಾಮಿ)

ಚಾಮರಾಜನಗರ: ಇದೆ ಮೊದಲ ಬಾರಿಗೆ ಎಸ್ಪಿ ಪದ್ಮಿನಿ ಸಾಹೋ ಅವರು ಪತ್ರಕರ್ತರೊಂದಿಗೆ ಸಭೆ ನಡೆಸಿದರು.

ಚಾಮರಾಜನಗರ ಎಸ್ಪಿಯಾಗಿ ಬಂದು ಸುಮಾರು ದಿನಗಳಾದ ಮೇಲೆ ಇದೆ ಮೊದಲ ಬಾರಿಗೆ ಪತ್ರಕರ್ತರ ಸಬೆ ಕರೆದು ಜಿಲ್ಲೆಯಲ್ಲಿನ ಹಾಗೂ ಪಟ್ಟಣದಲ್ಲಿನ ಹಲವಾರು ಸಮಸ್ಯೆಗಳ ಕುರಿತು ಅವರು ಚರ್ಚಿಸಿದರು.

ಸಭೆಯಲ್ಲಿ ಸಂಚಾರಿ ವ್ಯವಸ್ಥೆ, ಅಪ್ರಾಪ್ತ ಮಕ್ಕಳಿಂದ ವಾಹನ ಚಾಲನೆ, ಹಳ್ಳಿಗಳಲ್ಲಿಮದ್ಯ ಮಾರಾಟ ಸೇರಿದಂತೆ ಇನ್ನಿತರ ಕಾನೂನು ಬಾಹಿರ ಚಟುವಟಿಕೆ ಸಂಬಂಧ ಪತ್ರಕರ್ತರಿಂದ ಮಾಹಿತಿ ಪಡೆದರು.

ಸಭೆಯಲ್ಲಿ ಎಎಸ್ಪಿ ಉದೇಶ್ಣ, ವಾರ್ತಾ ಇಲಾಖಾ ಅದಿಕಾರಿ ರಮೇಶ್ ಹಾಜರಿದ್ದರು.