ಸೈಬರ್ ಕ್ರೈಮ್ ಠಾಣೆಗೆ ಪರಮೇಶ್ವರ್ ದೂರು

ಬೆಂಗಳೂರು: ಸೋಶಿಯಲ್ ಮೀಡಿಯಾ ಹಾವಳಿಯಿಂದ ಬೇಸತ್ತು ಮಾಜಿ ಉಪ ಮುಖ್ಯ ಮಂತ್ರಿ ಡಾ. ಜಿ. ಪರಮೇಶ್ವರ್  ಪೊಲೀಸ್ ಠಾಣೆ ಮೆಟ್ಟಿಲೇರಿದ್ದಾರೆ.

ಸೋಶಿಯಲ್ ಮೀಡಿಯಾದಲ್ಲಿ ಅವಹೇಳನವಾಗಿ ಬರೆಯಲಾಗಿದೆ ಎಂದು ಪರಮೇಶ್ವರ್ ದೂರು ನೀಡಿದ್ದಾರೆ.

ಫೇಸ್‍ಬುಕ್ ಮತ್ತು ಯೂಟ್ಯೂಬ್ ನಲ್ಲಿ ನಕಲಿ ಖಾತೆ ತೆರೆದು ತಮ್ಮ ಮತ್ತು ಮಗಳ ಬಗ್ಗೆ ವೀಡಿಯೋ ಹಾಕಿ ಅವಹೇಳನ ಮಾಡಲಾಗಿದೆ.

ರಾಜಕೀಯವಾಗಿ ನಮ್ಮನ್ನು ತಗ್ಗಿಸಲು ಯಾರೊ ಸಾಮಾಜಿಕ ಜಾಲತಾಣಗಳನ್ನ ಬಳಸಿಕೊಂಡಿದ್ದಾರೆ ಎಂದು ದೂರು ನೀಡಿದ್ದಾರೆ. ನಮ್ಮ ಬಗ್ಗೆ ಅವಹೇಳನಕಾರಿ ವೀಡಿಯೋಗಳನ್ನ ಅಪ್ಲೋಡ್ ಮಾಡಿ ತಮ್ಮ ಘನತೆಗೆ ಕುಂದು ತರಲು ಯತ್ನಿಸಿದ್ದಾರೆ ಎಂದು ತಮ್ಮ ಆಪ್ತನ ಮೂಲಕ ಸೈಬರ್ ಕ್ರೈಮ್ ಪೊಲೀಸ್ ಠಾಣೆಗೆ ಠಾಣೆಗೆ ದೂರು ನೀಡಿದ್ದಾರೆ ಪರಮೇಶ್ವರ್.