ಮಾಡಾಳ್ ವಿರೂಪಾಕ್ಷಪ್ಪಗೆ ಮಧ್ಯಂತರ ಜಾಮೀನು

ಬೆಂಗಳೂರು: ತಲೆ ಮರೆಸಿಕೊಂಡಿರುವ ಚನ್ನಗಿರಿ ಶಾಸಕ ಮಾಡಾಳ್‌ ವಿರೂಪಾಕ್ಷಪ್ಪಗೆ ಮಧ್ಯಂತರ ಜಾಮೀನು‌ ಮಂಜೂರಾಗಿದೆ.

ಹೈಕೋರ್ಟ್ ಏಕಸದಸ್ಯ ಪೀಠದ ನ್ಯಾಯಮೂರ್ತಿಗಳಾದ ನಟರಾಜನ್ ಅವರು ಮಾಡಾಳ್ ವಿರೂಪಾಕ್ಷಪ್ಪಗೆ ಮಧ್ಯಂತರ ಜಾಮೀನು ಮಂಜೂರು ಮಾಡಿದ್ದಾರೆ.

ಇನ್ನು 48 ಗಂಟೆಯೊಳಗೆ ನ್ಯಾಯಾಲಯದ ಮುಂದೆ ಶರಣಾಗುವಂತೆ ನ್ಯಾಯ ಮೂರ್ತಿಗಳು ಆದೇಶಿಸಿದ್ದಾರೆ.

5ಲಕ್ಷರೂ ಬಾಂಡ್ ಹಾಗೂ ಇಬ್ಬರು ಶೂರಿಟಿ ಕೊಡಬೇಕು ಎಂದೂ ಕೂಡಾ ಸೂಚಿಸಿದ್ದಾರೆ.

ಪುತ್ರ ಪ್ರಶಾಂತ್ ಮಾಡಾಳ್ 40 ಲಕ್ಷ ಲಂಚ ಪಡೆದ ಹಿನ್ನೆಲೆಯಲ್ಲಿ ಅವರ ಮನೆಯಲ್ಲಿ ಲೋಕಾಯುಕ್ತ ದಾಳಿ ನಡೆಸಿತ್ತು.

ಆ ವೇಳೆ ಎಂಟು ಕೋಟಿ ಹಣ ಪತ್ತೆಯಾದ ಕೂಡಲೇ ಮಾಡಾಳ್ ವಿರೂಪಾಕ್ಷಪ್ಪ ಬಂಧನ ಭೀತಿಯಲ್ಲಿ ತಲೆಮರೆಸಿಕೊಂಡಿದ್ದರು.

ತಮ್ಮ ವಕೀಲರ ಮೂಲಕ ನಿರೀಕ್ಷಣಾ ಜಾಮೀನು ಪಡೆಯಲು ಅರ್ಜಿ ಸಲ್ಲಿಸಿದ್ದರು.

ಹೈಕೋರ್ಟ್ ಏಕಸದಸ್ಯ‌ ಪೀಠದ ಮುಂದೆ ಮಂಗಳವಾರ ವಾಚಾರಣೆ ನಡೆದು ನ್ಯಾಯ ಮೂರ್ತಿ ನಟರಾಜನ್ ಶರತ್ತುಬದ್ಧ ಮಧ್ಯಂತರ ಜಾಮೀನು ಮಂಜೂರು ಮಾಡಿದ್ದಾರೆ.

48 ಗಂಟೆಯೊಳಗೆ ಶರಣಾಗುವಂತೆ ಸೂಚಿಸಿರುವುದರಿಂದ ಮಾಡಾಳ್ ತಾವಾಗಿಯೇ ಶರಣಾಗುತ್ತಾರಾ ಅಥವಾ ಪೊಲೀಸರೇ ಹಿಡಿದು ಕರೆತರುತ್ತಾರಾ ಕಾದುನೋಡಬೇಕಿದೆ.