ಹೆಚ್ಚುವರಿ ದಾಸ್ತಾನು: ಎಂಟು ಲಕ್ಷದ ಮೌಲ್ಯದ ಮದ್ಯ ವಶ

(ವರದಿ: ರಾಮಸಮುದ್ರ ಎಸ್.ವೀರಭದ್ರಸ್ವಾಮಿ)

ಚಾಮರಾಜನಗರ: ಹೆಚ್ಚುವಾರಿ ಧಾಸ್ತಾನು ಮಾಡಲಾಗಿದ್ದ ವೈನ್ಸ್ ಸ್ಟೋರ್ ಮೇಲೆ ದಾಳಿ ನಡೆಸಿದ ಅದಿಕಾರಿಗಳು ಎಂಟು ಲಕ್ಷಕ್ಕೂ ಹೆಚ್ಚು ಮೌಲ್ಯದ ಮದ್ಯ ವಶಪಡಿಸಿಕೊಂಡಿದ್ದಾರೆ.

ಈ ವೇಳೆ ಒಬ್ಬ ಆರೋಪಿನ್ನು ಬಂದಿಸಿದ್ದಾರೆ.

ಯಳಂದೂರು ಪಟ್ಟಣದಲ್ಲಿನ ಸಿಎಲ್-2 ಸನ್ನದುದಾರರಾದ ಮಷ್ಪಲತ ಅವರಿಗೆ ಸೇರಿದ ಗುರು ಕೃಪೆ ವೈನ್ಸ್‌ ನಲ್ಲಿ ತಪಾಸಣೆ ನಡೆಸಿ ಪರಿಶಿಲಿಸಿದಾಗ ತಾಳೆಯಾಗಿಲ್ಲ,ಜತೆಗೆ ವ್ಯತ್ಯಾಸ ಕಂಡು ಬಂದಿದೆ.

1555.200ಲೀಟರ್ ಭಾತಮ್ (180ರ,ಪೆ) ಹಾಗೂ 670ಲೀಟರ್ ಆಯ‌ (86 ರ.ಪೆ)ಅನ್ನು ವಶಪಡಿಸಿಕೊಳ್ಳಲಾಗಿದೆ ಈ ಮದ್ಯದ ಮೌಲ್ಯ 7,20,000 ರೂಗಳು.

ಬಿಯರ್ ಮೌಲ್ಯ1,03,000 ರೂಗಳು. ಒಟ್ಟು 8,23,000 ರೂ ಮದ್ಯ ಮತ್ತು ಬಿಯರ್ ಅನ್ನು ವಶಪಡಿಸಿಕೊಂಡು ಪ್ರಕರಣವನ್ನು ದಾಖಲಿಸಲಾಗಿದೆ ಎಂದು ಅಬ್ಕಾರಿ ಜಂಟಿ ನಿರ್ದೇಶಕ ವಿಜಯ್ ಕುಮಾರ್ ಅವರು ಸುದ್ದಿಘೊಷ್ಠಿಯಲ್ಲಿ ಹೇಳಿದರು.

ಚಾಮರಾಜನಗರ ಜಿಲ್ಲೆಯ ಅಬಕಾರಿ ಇಲಾಖೆ ವತಿಯಿಂದ ವಿಧಾನಸಭಾ ಚುನಾವಣೆ-2023 ರ ಸಂಬಂಧ ನಿಷ್ಪಕ್ಷಪಾತವಾಗಿ ಚುನಾವಣೆ ನಡೆಸಲು  ಕ್ರಮವಹಿಸಲಾಗಿದೆ ಎಂದು ವಿಜಯ್ ಕುಮಾರ್ ತಿಳಿಸಿದರು.

ಜಿಲ್ಲೆಯಲ್ಲಿ ಕೊಳ್ಳೇಗಾಲ ವಲಯ 10 ಸೂಕ್ಷ್ಮ ಸನ್ನದುಗಳು, ಚಾಮರಾಜನಗರ ವಲಯದಲ್ಲಿ 12 ಸೂಕ್ಷ್ಮ ಸನ್ನದುಗಳು, ಗುಂಡ್ಲುಪೇಟೆ ವಲಯದಲ್ಲಿ 14 ಸೂಕ್ಷ್ಮ ಸನ್ನದುಗಳು ಸೇರಿ ಒಟ್ಟು 36 ಸೂಕ್ಷ್ಮ ಸನ್ನದುಗಳನ್ನು ಗುರುತಿಸಲಾಗಿದೆ ಎಂದು ಅವರು ತಿಳಿಸಿದರು.

ಸನ್ನದುದಾರರು ಸನ್ನದು ಷರತ್ತು ಉಲ್ಲಂಘಿಸದಂತೆ ಕ್ರಮವಹಿಸಲಾಗಿದೆ, ಸೂಕ್ಷ್ಮ ಸ್ಥಳಗಳು ಮತ್ತು ಸಂಶಯಾಸ್ಪದ ಸ್ಥಳಗಳ ಮೇಲೆ ಹಾಗೂ ಗ್ರಾಮಗಳಲ್ಲಿ ಅಕ್ರಮವಾಗಿ ಮದ್ಯ ಮಾರಾಟ ಮಾಡುವುದು ಕಂಡುಬಂದಲ್ಲಿ ಕಾನೂನು ರೀತಿ ಕ್ರಮ ಜರುಗಿಸಲಾಗುವುದು ಎಂದು ಹೇಳಿದರು.

ಚುನಾವಣೆಯ ಮುಂಜಾಗೃತ ಕ್ರಮವಾಗಿ ಅಬಕಾರಿ ಅಕ್ರಮಗಳಲ್ಲಿ ಭಾಗಿಯಾದ ಹಳೆ ಆರೋಪಿಗಳ ಮೇಲೆ ಒಟ್ಟು 21 ಹಳೇ ಆರೋಪಿಗಳು ಇತರೆ 19 ಹಳೇ ಆರೋಪಿಗಳು ಒಟ್ಟು 40 ಹಳೇ ಆರೋಪಿಗಳಿಂದ ಸದ್ವರ್ತನೆಗಾಗಿ ಬಾಂಡ್‌ನ್ನು ಪಡೆಯಲಾಗಿದೆ.

ಒಂದು ತಿಂಗಳಲ್ಲಿ ಚಾಮರಾಜನಗರ ಜಿಲ್ಲೆಯಲ್ಲಿ ಅಬಕಾರಿ ಇಲಾಖೆ ವತಿಯಿಂದ ಅಕ್ರಮ ಮದ್ಯ ಚಟುವಟಿಕೆಗಳನ್ನು ಪತ್ತೆಹಚ್ಚಿ ಒಟ್ಟು 16 ದಾಳಿ ನಡೆಸಿ, ಅಬಕಾರಿ ಕಾನೂನಿನನ್ವಯ 55 ಮತ್ತು ಸನ್ನದು ಷರತ್ತು ಉಲ್ಲಂಘನೆ ಸಂಬಂಧ 23 ಸಾಮಾನ್ಯ ಮೊಕದ್ದಮೆ ಸೇರಿ ಒಟ್ಟು 85 ಪ್ರಕರಣಗಳನ್ನು ದಾಖಲಿಸಲಾಗಿದೆ.

ಒಟ್ಟು 96.390 ಲೀ. ಮದ್ಯ, 1.130 ಲಿ., ಬಿಯರ್, ಹಾಗೂ 3 ವಿವಿಧ ವಾಹನಗಳನ್ನು ವಶಪಡಿಸಿಕೊಳ್ಳಲಾಗಿದೆ ಎಂದು ಹೇಳಿದರು.

58 ಆರೋಪಿಗಳನ್ನು ಇದುವರೆಗೆ ಬಂಧಿಸಲಾಗಿದೆ. ಒಟ್ಟಾರೆ ಅಂದಾಜು ಮೌಲ್ಯ 1,49,136 ರೂಗಳಾಗಿದೆ ಎಂದು ವಿಜಯ್ ಕುಮಾರ್ ವಿವರಿಸಿದರು.

ಡಿವೈ ಎಸ್ ಪಿ ಮೋಹನ್ ಕುಮಾರ್, ಅಬ್ಕಾರಿ ನಿರೀಕ್ಷಕ ಮಹೇಶ್, ಮಹದೇವು, ಉಮಾಶಂಕರ್, ಸಬ್ ಇನ್ಸ್ ಪೆಕ್ಟರ್ ನಂದಿನಿ, ಶ್ರೀದರ್ ಸುದ್ದಿಗೋಷ್ಟಿಯಲ್ಲಿ ಉಪಸ್ಥಿತರಿದ್ದರು.