ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಸಂಸತ್ ಸದಸ್ಯ ಸ್ಥಾನ ಅನರ್ಹ

ನವದೆಹಲಿ: ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿಯವರನ್ನು ಸಂಸತ್ ಸದಸ್ಯ ಸ್ಥಾನದಿಂದ ಅನರ್ಹಗೊಳಿಸಲಾಗಿದೆ.

2019 ರಲ್ಲಿ ವಯನಾಡು ಸಂಸದರಾದ ರಾಹುಲ್ ಗಾಂಧಿ ಕೋಲಾರ ಪ್ರವಾಸದಲ್ಲಿದ್ದಾಗ ಭಾಷಣದಲ್ಲಿ ಪ್ರಧಾನಿ ನರೇಂದ್ರ ಮೋದಿಯವರ ಬಗ್ಗೆ ಅವಹೇಳನವಾಗಿ ಮಾತನಾಡಿದ್ದರು.

ಕಳ್ಳರೆಲ್ಲರೂ ಕೂಡಾ ಮೋದಿ ಸರ್ ನೇಮ್ ಹೊಂದಿರುತ್ತಾರೆ ಎಂದು ಕೋಲಾರ ಮೆರವಣಿಗೆ ವೇಳೆ ಹೇಳಿಕೆ ನೀಡಿದ್ದರು.

ಹಾಗಾಗಿ ರಾಹುಲ್ ವಿರುದ್ಧ ಮಾನನಷ್ಟ ಮೊಕದ್ದಮೆ ‌ಹೂಡಲಾಗಿತ್ತು.ವಾದ,ವಿವಾದ ಮುಗಿದು ಸೂರತ್ ಕೋರ್ಟ್ ಎರಡು‌ ವರ್ಷ ಜೈಲು ಶಿಕ್ಷೆ ಪ್ರಕಟಿಸಿತ್ತು

ಇದರ ಬೆನ್ನಲ್ಲೇ ಲೋಕಸಭಾ ಕಾರ್ಯದರ್ಶಿ ಉತ್ಪಲ್ ಕುಮಾರ್ ಸಿಂಗ್ ಅವರು ಸಂಸತ್ ಸದಸ್ಯ ಸ್ಥಾನದಿಂದ ರಾಹುಲ್‌ ಗಾಂಧಿಯನ್ನು ಅನರ್ಹಗೊಳಿಸಿ ಶುಕ್ರವಾರ ಆದೇಶ ಹೊರ ಡಿಸಿದ್ದಾರೆ.

ಮಾರ್ಚ್ 23ರಿಂದಲೇ ಈ ಆದೇಶ ಜಾರಿಗೆ ಬರಲಿದೆ.

ಗುಜರಾತ್ ಮಾಜಿ ಸಚಿವ ಪೂರ್ಣೇಶ್  ಮೋದಿ ರಾಹುಲ್ ವಿರುದ್ಧ ಮೊಕದ್ದಮೆ ಹೂಡಿ ನನಗೂ ಮೋದಿ ಹೆಸರಿದೆ,ಇನ್ನೂ ಹಲವರು ಮೋದಿ ಹೆಸರಿನವರು ಇದ್ದಾರೆ ಹಾಗಾದರೆ ನಾವೆಲ್ಲರೂ ಕಳ್ಳರೆಂದಾಗುತ್ತದೆ.ಇದರಿಂದ ಮಾನಹಾನಿಯಾಗಿದೆ ಎಂದು ದೂರು ನೀಡಿದ್ದರು.