5 ರೌಡಿ ಶೀಟರ್ ಗಳಿಗೆ ಗಡೀಪಾರು ಶಿಕ್ಷೆ

ಮೈಸೂರು: ವಿಧಾನಸಭಾ ಚುನಾವಣೆ ದಿನಾಂಕ ಘೋಷಣೆಯಾಗುತ್ತಿದ್ದಂತೆಯೇ ಮೈಸೂರು ನಗರ ಪೊಲೀಸರು ಭಯಮುಕ್ತ ವಾತಾವರಣ ನಿರ್ಮಿಸಲು ರೌಡಿಗಳಿಗೆ ಕಠಿಣ ಎಚ್ಚರಿಕೆ ರವಾನಿಸಿದ್ದಾರೆ.

ಮುನ್ನೆಚ್ಚರಿಕೆ ಕ್ರಮವಾಗಿ ಮೈಸೂರು ನಗರದ 5 ರೌಡಿ ಶೀಟರುಗಳನ್ನ ಗಡೀಪಾರು ಮಾಡಿದ್ದಾರೆ.

5 ಮಂದಿ ರೌಡಿ ಶೀಟರ್ ಗಳು ನಿರಂತರವಾಗಿ ಅಪರಾಧ ಚಟುವಟಿಕೆಗಳಲ್ಲಿ ಭಾಗವಹಿಸಿ ಸಮಾಜದಲ್ಲಿ ಭಯದ ವಾತಾವರಣ ಸೃಷ್ಟಿಸುವ ಪ್ರಯತ್ನ ನಡೆಸುತ್ತಿದ್ದ ಕಾರಣ ಕಾನೂನು ಮತ್ತು ಸುವ್ಯವಸ್ಥೆ ಡಿಸಿಪಿ ಎನ್.ಮುತ್ತುರಾಜ್ ರವರು ಗಡೀಪಾರು ಆದೇಶ ಹೊರಡಿಸಿದ್ದಾರೆ.

ವಿದ್ಯಾರಣ್ಯಪುರಂ ಪೊಲೀಸ್ ಠಾಣಾ ವ್ಯಾಪ್ತಿಯ ಯಶವಂತ್@ಯಶು@ಮಿಕ್ಕಿ ಯನ್ನ 4 ತಿಂಗಳ ಕಾಲ ಶಿವಮೊಗ್ಗ ಜಿಲ್ಲೆಗೆ, ಎನ್.ಆರ್.ಹಾಗೂ ಮಂಡಿ ಪೊಲೀಸ್ ಠಾಣಾ ವ್ಯಾಪ್ತಿಯ ಸುಬಾನ್.ಆ.ಕೊಯ್ತಾಬಾಬು ಎಂಬಾತನನ್ನ 4 ತಿಂಗಳ ಕಾಲ ಚಿಕ್ಕಬಳ್ಳಾಪುರ ಜಿಲ್ಲೆಗೆ,ಲಕ್ಷ್ಮೀಪುರಂ ಪೊಲೀಸ್ ಠಾಣಾ ವ್ಯಾಪ್ತಿಯ ಕೃಷ್ಣ.@.ಕಿಟ್ಟಿ ಯನ್ನ 5 ತಿಂಗಳ ಕಾಲ ದಾವಣಗೆರೆ ಜಿಲ್ಲೆಗೆ,ಉದಯಗಿರಿ ಪೊಲೀಸ್ ಠಾಣಾ ವ್ಯಾಪ್ತಿಯಸೈಯದ್ ಅಯೂಬ್.@.ಬಿಡ್ಡ ನಪನ್ನ 5 ತಿಂಗಳ ಕಾಲ ಚಿಕ್ಕಮಂಗಳೂರು ಜಿಲ್ಲೆಗೆ ಹಾಗೂ ಲಷ್ಕರ್ ಪೊಲೀಸ್ ಠಾಣಾ ವ್ಯಾಪ್ತಿಯ ತೌಸೀಫ್ ಖಾನ್.@.ಡಾನ್ ಗೆ 5 ತಿಂಗಳ ಕಾಲ ಚಿಕ್ಕಬಳ್ಳಾಪುರ ಜಿಲ್ಲೆಗೆ ಗಡೀಪಾರು ಮಾಡಿ ಆದೇಶಿಸಿರುತ್ತಾರೆ.

ಈ ಎಲ್ಲಾ ರೌಡಿ ಶೀಟರ್ ಗಳು ವಿವಿದ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಹಲವಾರು ಪ್ರಕರಣಗಳಲ್ಲಿ ಭಾಗಿಯಾಗಿದ್ದು ಎಚ್ಚರಿಕೆಯ ನೀಡಿದ್ದರೂ ಅಪರಾಧ ಚಟುವಟಿಕೆಗಳನ್ನ ಮುಂದುವರೆಸಿದ್ದರು ಆದ್ದರಿಂದ ನಗರ ಪೊಲೀಸರು ಗಡೀಪಾರು ಆದೇಶ ಹೊರಡಿಸಿದ್ದಾರೆ.

ಯಾವುದೇ ವ್ಯಕ್ತಿಗಳು ಇಂತಹ ಚಟುವಟಿಕೆಗಳಲ್ಲಿ ಭಾಗಿಯಾದರೆ ಅಂತಹವರ ವಿರುದ್ದ ಕ್ರಮ ಕೈಗೊಳ್ಳಲಾಗುವುದು ಎಂದು ನಗರ ಪೊಲೀಸ್ ಆಯುಕ್ತ ಬಿ.ರಮೇಶ್ ಎಚ್ಚರಿಸಿ ದ್ದಾರೆ.