ಮೈಸೂರು: ಪವರ್ ಫುಲ್ ಮೈಂಡ್ಸ್ ವತಿಯಿಂದ ಇದೇ ಭಾನುವಾರ (ಏಪ್ರಿಲ್ 2) ಸಂಜೆ 4 ರಿಂದ 5.30 ರವರೆಗೆ ಪೋಷಕರ ಕಾರ್ಯಾಗಾರ ಆಯೋಜಿಸಲಾಗಿದೆ.
ಈ ಪೋಷಕರ ಕಾರ್ಯಾಗಾರಕ್ಕೆ ಉಚಿತ ಪ್ರವೇಶವಿದೆ ಎಂದು ಮೈಸೂರು ಪತ್ರಕರ್ತರ ಭವನದಲ್ಲಿ ಹಮ್ಮಿಕೊಂಡಿದ್ದ ಸುದ್ದಿಗೋಷ್ಠಿಯಲ್ಲಿ ಪವರ್ ಫುಲ್ ಮೈಂಡ್ಸ್ ನ ವಿದ್ಯಾರ್ಥಿ ಸಲಹೆಗಾರರಾದ ಬಿ.ಎಲ್. ವೇದಪ್ರದ ತಿಳಿಸಿದರು.
ಪೋಷಕರ ಕಾರ್ಯಾಗಾರದಲ್ಲಿ ಮುಖ್ಯ ಅತಿಥಿಗಳಾಗಿ ಪ್ರೇರಣಾ ಅಕಾಡೆಮಿಯ ನಿರ್ದೇಶಕರಾದ ಎಸ್. ಎಸ್. ಭಟ್ ಹಾಗೂ ನಿರಂಜನ್ ಅವರುಗಳು ಭಾಗವಹಿಸಲಿದ್ದಾರೆ ಎಂದು ಹೇಳಿದರು.
ಮಕ್ಕಳ ಪಾಲನೆ, ಆರೋಗ್ಯ,ವಿದ್ಯಾಭ್ಯಾಸ ಮಕ್ಕಳನ್ನು ಬೆಳೆಸುವುದು ಹಾಗೂ ಅವರನ್ನು ಸರಿದಾರಿಗೆ ತರುವುದು,
ಪೋಷಕರ ಹಾಗೂ ಮಕ್ಕಳ ಕೋಪವನ್ನು ನಿಯಂತ್ರಿಸುವುದು ಮತ್ತು ಭಾವನಾತ್ಮಕ ಸಂಬಂಧ ಸರಿಪಡಿಸುವುದರ ಬಗ್ಗೆ ತಿಳಿಸಿಕೊಡಲಾಗುತ್ತದೆ ಎಂದು ಹೇಳಿದರು.
ಮಕ್ಕಳ ಭಾವನೆಗಳಿಗೆ ಬೆಲೆ ಕೊಟ್ಟು ಅವರನ್ನು ಪ್ರೋತ್ಸಾಹಿಸುವುದರಿಂದ ಈ ಸಮಾಜಕ್ಕೆ ಉತ್ತಮ ಆಸ್ತಿಯಾಗುವುದರಲ್ಲಿ ಸಂದೇಹವಿಲ್ಲ ಎಂದು ಅವರು ತಿಳಿಸಿದರು.
ಈ ಕುರಿತು ಚರ್ಚೆ ಮತ್ತು ವಿಚಾರ ವಿನಿಯಮದಲ್ಲಿ ಪೋಷಕರು ಭಾಗವಹಿಸಬೇಕೆಂದು ವೇದಪ್ರದ ಮನವಿ ಮಾಡಿದರು.
ಕಾರ್ಯಾಗಾರವು ಪ್ರೇರಣ ಅಕಾಡೆಮಿ, ಹೋಟೆಲ್ ಮಧು ನಿವಾಸ, ಮೊದಲನೇ ಮಹಡಿ, ಗೀತಾ ಸ್ಕೂಲ್ ಹಿಂಭಾಗ,ಸಿದ್ಧಾರ್ಥನಗರ, ಮೈಸೂರು ಈ ವಿಳಾಸದಲ್ಲಿ ಏ.2ರಂದು ಸಂಜೆ 4 ರಿಂದ 5.30 ರವರೆಗೆ ನಡೆಯಲಿದೆ.
ನೋಂದಣಿಗಾಗಿ 9880792029 ವಾಟ್ಸ್ಆಫ್ ಅಥವಾ ಎಸ್ಎಂಎಸ್ ಮೂಲಕ ಸಂಪರ್ಕಿಸಬಹುದಾಗಿದೆ ಎಂದು ವೇದಪ್ರಭದ ತಿಳಿಸಿದರು.
ನೋಂದಣಿಗಾಗಿ 9880792029 ವಾಟ್ಸ್ಆಫ್ ಅಥವಾ ಎಸ್ಎಂಎಸ್ ಮೂಲಕ ಸಂಪರ್ಕಿಸಬಹುದಾಗಿದೆ.