ಅಕ್ರಮವಾಗಿ ಶೇಖರಿಸಿಟ್ಟಿದ್ದ ಲಕ್ಷಾಂತರ ‌ಬೆಲೆಯ ಆಹಾರ ಪದಾರ್ಥಗಳು ಸೀಜ್

ಮೈಸೂರು: ಕರ್ನಾಟಕ ವಿಧಾನ ಸಭಾ ಚುನಾವಣೆಯ ನೀತಿ ಸಂಹಿತೆ ಜಾರಿಯಲ್ಲಿದ್ದು ಎಲ್ಲಾ ರಾಜಕಾರಣಿಗಳ ಮೇಲೆ ಫೈಯಿಂಗ್ ಸ್ಕ್ವಾಡ್ ನವರು ಹದ್ದಿನ ಕಣ್ಣಿರಿಸಿದ್ದಾರೆ.

ಫ್ಲೈಯಿಂಗ್ ಸ್ಕ್ವಾಡ್ ನವರು ಗಸ್ತು ತಿರುಗುತ್ತಿದ್ದಾಗ ಖಚಿತ ಮಾಹಿತಿ ಆಧರಿಸಿ  ಹಂಚ್ಯಾ ಗ್ರಾಮದ ಸ.ನಂ. 296 ರ ಸನ್ ಸ್ಕೂಲ್ ಗಾರ್ಡನ್ ಲೇಔಟ್ ಸೈಟ್ ನಂ. 22ರಲ್ಲಿನ ಮನೆಯ ಕೆಳಭಾಗದ ಗೋಡಾನ್‌ ನಲ್ಲಿ ದಾಳಿ ನಡೆಸಿದರು.

ಅಲ್ಲಿ ಅಕ್ರಮವಾಗಿ ಶೇಖರಿಸಿಟ್ಟಿದ್ದ ಲಕ್ಷಾಂತರ ‌ಬೆಲೆಯ ಆಹಾರ ಪದಾರ್ಥಗಳು, ಮತ್ತಿತರ ವಸ್ತುಗಳು ಪತ್ತೆಯಾಗಿದೆ.

ಒಟ್ಟು 732 ಅಕ್ಕಿ ಬ್ಯಾಗ್‌ಗಳು (ಪ್ರತಿ ಬ್ಯಾಗ್‌ನಲ್ಲಿ 26 ಕೆಜಿ), ವಿವಿಧ ಮಾದರಿಯ ಆಹಾರ ಪದಾರ್ಥಗಳು, ಎಣ್ಣೆ, ಸೋಪು, ರವೆ, ಪೇಸ್ಟ್ ಹಾಗೂ ಇತರ ಆಹಾರ ಸಾಮಾಗ್ರಿಗಳ ಒಟ್ಟು 722 ಕಿಟ್ ಬ್ಯಾಗ್‌ಗಳು ಸಿಕ್ಕಿವೆ.

ಅಲ್ಲದೆ ಸನ್‌ ಪ್ಯೂರ್ ಕಂಪನಿಗೆ ಸೇರಿದ ಅಡಿಗೆ ಎಣ್ಣೆಯ‌‌ ತಲಾ 10 ಪೌಚ್‌ ಗಳಿರುವ ಒಟ್ಟು 146 ಬಾಕ್ಸ್‌ಗಳು, ಸನ್ ಪ್ಯೂರ್ ಕಂಪನಿಯ ವನಸ್ಪತಿ, ತಲಾ 10 ಪೌಚ್‌ಗಳಿರುವ ಒಟ್ಟು 73 ಬಾಕ್ಸ್‌ಗಳು ಹಾಗೂ HAMDARD Cowhot 12 ಬಾಟಲಿಗಳಿರುವ SHARBATH ROOHABZA ಒಟ್ಟು 60 ಬಾಕ್ಸ್‌ಗಳನ್ನು ಶೇಖರಿಸಿಡಲಾಗಿತ್ತು.

ಇದೆಲ್ಲದರ ದಾಸ್ತಾನುಗಳ ಮೌಲ್ಯವು ಅಂದಾಜು 19,69,647 ರೂಗಳು. ಈ ಸಂಬಂಧ C.S.R. ಫಂಡ್ ಮುಖಾಂತರ ಮಾಸೂಮ್ ಟ್ರಸ್ಟ್‌ಗೆ, ಸದರಿ ದಾಸ್ತಾನುಗಳು ಬಂದಿರುವುದಾಗಿ ತಿಳಿಸಿದ್ದು, ಬಡ ಕುಟುಂಬಗಳಿಗೆ ಹಂಚಿಕೆ ಮಾಡಲು ಇಟ್ಟಿಕೊಂಡಿರುವುದಾಗಿ ತಿಳಿಸಿದ್ದಾರೆ.

ಆದರೆ ಈ ಸಂಬಂಧ ಯಾವುದೇ ಅನುಮತಿ ಪಡೆದಿರುವ ಬಗ್ಗೆ ದಾಖಲಾತಿಗಳನ್ನು ಹಾಜರುಪಡಿಸಿಲ್ಲ.

ನೀತಿ ಸಂಹಿತೆ ಜಾರಿಯಲ್ಲಿದ್ದು, ಮತದಾರರಿಗೆ ಆಮಿಷ ಒಡ್ಡುವ ಸಲುವಾಗಿ ಶೇಖರಿಸಿಡಲಾಗಿದೆ ಎಂಬ ಅನುಮಾನ ವ್ಯಕ್ತವಾಗಿದೆ.

ಹಾಗಾಗಿ ಚಾಮುಂಡೇಶ್ವರಿ ವಿಧಾನ ಸಭಾ ಕ್ಷೇತ್ರದ ಚುನಾವಣಾಧಿಕಾರಿಗಳ ಸೂಚನೆಯ ಮೇರೆಗೆ ಫೈಯಿಂಗ್ ಸ್ಕ್ವಾಡ್ ತಂಡದವರು ಅಕ್ರಮವಾಗಿ ಶೇಖರಣೆ ಮಾಡಿದ್ದ ಈ‌ ಎಲ್ಲಾ ದಾಸ್ತಾನುಗಳನ್ನು ಮಹಜರ್ ನಡೆಸಿ ಸೀಜ್ ಮಾಡಲಾಗಿದೆ.