ನಮ್ಮ ಕೋಪವೇ ನಮಗೆ ಶತೃ -ವೇದಪ್ರದ

ಮೈಸೂರು: ಪವರ್ ಫುಲ್ ಮೈಂಡ್ಸ್ ವತಿಯಿಂದ ಭಾನುವಾರ ಏರ್ಪಡಿಸಿದ್ದ ಪೋಷಕರ ಕಾರ್ಯಾಗಾರ ಯಶಸ್ವಿಯಾಯಿತು.

ಕಾರ್ಯಾಗಾರವು ಮೈಸೂರಿನ ಸಿದ್ಧಾರ್ಥನಗರದಲ್ಲಿರುವ ಪ್ರೇರಣ ಅಕಾಡೆಮಿಯಲ್ಲಿ ನಡೆಯಿತು.

ಈ ಪೋಷಕರ ಕಾರ್ಯಾಗಾರಕ್ಕೆ ಉಚಿತ ಪ್ರವೇಶವಿದ್ದುದರಿಂದ ಬಹಳಷ್ಟು ಪೋಷಕರು  ಪಾಲ್ಗೊಂಡಿದ್ದರು.

ನಮ್ಮ ಕೋಪವೇ ನಮಗೆ ಶತೃ, ಅದನ್ನು ನಿಯಂತ್ರಸದೆ ಇರುವುದರಿಂದ ಹಲವು ದುಷ್ಪರಿಣಾಮ ಉಂಟಾಗುತ್ತದೆ, ಕೋಪವನ್ನು ತಡೆದರೆ ಮಕ್ಕಳ ಮನಸು ಉಲ್ಲಸಿತವಾಗುತ್ತದೆ ಎಂದು ಪವರ್ ಫುಲ್ ಮೈಂಡ್ಸ್ ನ ವಿದ್ಯಾರ್ಥಿ ಸಲಹೆಗಾರರಾದ ಬಿ.ಎಲ್. ವೇದಪ್ರದ ತಿಳಿಸಿದರು.

ಪೋಷಕರ ಪ್ರಶ್ನೆಗೆ ಉತ್ತರಿಸಿ ಕೆಲ ಸಲಹೆಗಳನ್ನು ನೀಡಿದ ಅವರು ಪೋಷಕರು ಕೋಪ ಬಂದಾಗ ಅದನ್ನು ನಿಯಂತ್ರಿಸಿ ಕೊಳ್ಳಬೇಕೆಂದರೆ ತಕ್ಷಣ ಬೇರೆ ಯಾವುದಾದರೂ ಕೆಲಸದಲ್ಲಿ ತೊಡಗಿಕೊಳ್ಳಬೇಕು ಆಗ ಪರಿಸ್ಥಿತಿ ತಿಳಿಗೊಳ್ಳುತ್ತದೆ ಎಂದು ಹೇಳಿದರು.

ಯಾವುದೇ ರೀತಿಯಲ್ಲೂ ಮಕ್ಕಳ ಮೇಲೆ ಒತ್ತಡ ಹೇರಬೇಡಿ ಇದರಿಂದ ಮಕ್ಕಳ ಮೇಲೆ ದುಷ್ಪರಿಣಾಮ ಬೀರಲಿದೆ,ಹಾಗಾಗಿ ಅವರನ್ನು ಉತ್ತೇಜಿಸುವ ನಿಟ್ಟಿನಲ್ಲಿ ಮುಂದಾಗಬೇಕು.

ನಾವು ಏನು ಮಾಡುತ್ತೇವೋ ಅದನೇ ಮಕ್ಕಳು ಅನುಸರಿಸುತ್ತಾರೆ.ನಾವು ಹೇಳಿದ್ದನ್ನ ಅವರು ಮಾಡುವುದಿಲ್ಲ.ಹಾಗಾಗಿ ಒಳ್ಳೆಯ ಕೆಲಸ ಮಾಡುವ ಮೂಲಕ ಪೊಷಕರು ಪ್ರೇರಣೆ ನೀಡಬೇಕು ಎಂದು ತಿಳಿಸಿದರು.

ಮಕ್ಕಳ ಪಾಲನೆ, ಆರೋಗ್ಯ,ವಿದ್ಯಾಭ್ಯಾಸ ಮಕ್ಕಳನ್ನು ಬೆಳೆಸುವುದು ಹಾಗೂ ಅವರನ್ನು ಸರಿದಾರಿಗೆ ತರುವುದು ಹೇಗೆಂದು ಅವರು ತಿಳಿಸಿಕೊಟ್ಟರು.

ಪೋಷಕರ ಹಾಗೂ ಮಕ್ಕಳ ಭಾವನಾತ್ಮಕ ಸಂಬಂಧ ಸರಿಪಡಿಸುವುದು ಹೇಗೆಂಬ ಬಗ್ಗೆ ಪ್ರಾತ್ಯಕ್ಷಿಕೆ ಮೂಲಕ ತಿಳಿಸಿಕೊಡಲಾಯಿತು

ಮಕ್ಕಳ ಭಾವನೆಗಳಿಗೆ ಬೆಲೆ ಕೊಟ್ಟು ಅವರನ್ನು ಪ್ರೋತ್ಸಾಹಿಸುವುದರಿಂದ ಅವರು ಸಮಾಜಕ್ಕೆ ಉತ್ತಮ ಆಸ್ತಿಯಾಗುವುದರಲ್ಲಿ ಸಂದೇಹವಿಲ್ಲ ಎಂಬುದನ್ನು ವೇದಪ್ರದ ಪೋಷಕರಲ್ಲಿ ಮನದಟ್ಟು ಮಾಡಿದರು.

ಪೋಷಕರ ಕಾರ್ಯಾಗಾರದಲ್ಲಿ ಮುಖ್ಯ ಅತಿಥಿಗಳಾಗಿ ಪ್ರೇರಣಾ ಅಕಾಡೆಮಿಯ ನಿರ್ದೇಶಕರಾದ ಎಸ್. ಎಸ್. ಭಟ್ ಉಪಸ್ಥಿತರಿದ್ದರು‌