(ವರದಿ:ರಾಮಸಮುದ್ರ ಎಸ್.ವೀರಭದ್ರಸ್ವಾಮಿ)
ಚಾಮರಾಜನಗರ: ನಗರದ ಗುಂಡ್ಲುಪೇಟೆ ಭಾಗದ ಬಂಡಿಪುರ – ಕೇರಳದ ಗಡಿ ಭಾಗ ಹಾಗೂ ಮೂಲೆ ಹೊಳೆ ಚೆಕ್ ಪೋಸ್ಟ್ ಗಳು ನಾಮಕಾವಸ್ಥೆಗೆ ಕರ್ತವ್ಯ ನಿರ್ವಹಣೆ ಮಾಡುತ್ತಿವೆ.
ಈ ಚೆಕ್ ಪೊಸ್ಟ್ ಗಳಲ್ಲಿ ಸಿ ಸಿ ಕ್ಯಾಮೆರಾ ಅಳವಡಿಕೆ ಕಡ್ಡಾಯಗೊಳಿಸಬೇಕಿದೆ.
ಗುಂಡ್ಲುಪೇಟೆ ಪೊಲೀಸರು
ಸ್ಥಳೀಯ ವಾಹನಗಳನ್ನ ತಪಾಸಣೆ ಮಾಡದೆ ಇದ್ದರೆ, ಮತ್ತೊಂದೆಡೆ ಟಿಪ್ಪರ್ ವಾಹನಗಳಲ್ಲಿ ಕಪ್ಪ ಕಾಣಿಕೆ ಪಡೆದು ಕರ್ನಾಟಕದ ಗಡಿಯಿಂದ ಕೇರಳ ಪ್ರದೇಶಕ್ಕೆ ರಾಜಾರೋಷವಾಗಿ ಬೇಕಾದ್ದೆಲ್ಲಾ ಹೋಗಲು ಬಿಡುತ್ತಿದ್ದಾರೆ.
ಆದರೆ ಸಂಬಂಧಪಟ್ಟ ಗಣಿ ಇಲಾಖೆ, ಅರಣ್ಯ ಇಲಾಖೆ, ಪೊಲೀಸ್ ಇಲಾಖೆ ಕೈಕಟ್ಟಿ ಕುಳಿತಿವೆ.
ಹೆಸರಿಗೆ ಮಾತ್ರ ವಾಹನದ ನಂಬರನ್ನು ಪಡೆದುಕೊಳ್ಳುವ ಅಧಿಕಾರಿಗಳು ಒಳಗೆ ಏನಿದೆ ಎಂಬುದನ್ನು ತಪಾಸಣೆ ಮಾಡುವ ಗೋಜಿಗೇ ಹೋಗುವುದಿಲ್ಲ.
ಇದಕ್ಕೆ ತಾಜಾ ಉದಾಹರಣೆ ಎಂದರೆ ಗುಂಡ್ಲುಪೇಟೆಯಿಂದ ಮೂಳೆ ಹೊಳೆ ಚೆಕ್ ಪೋಸ್ಟ್ ಮೂಲಕ ಕೇರಳಕ್ಕೆ ಟಿಪ್ಪರ್ ಗಳಲ್ಲಿ ಕಲ್ಲು ದಿಂಡುಗಳು ಹೋಗುತ್ತಿರುವುದು.
ಇದೆಲ್ಲಾ ಗೊತ್ತಿದ್ದರೂ ಸಂಬಂಧಪಟ್ಟ ಅಧಿಕಾರಿಗಳು ಮಾತ್ರ ಜಾಣ ಮೌನ ವಹಿಸಿದ್ದಾರೆ.
ವಾಹನಗಳನ್ನು ತಪಾಸಣೆ ಮಾಡದೆ ಇರುವುದರಿಂದ ಬಾಂಬ್ ತೆಗೆದುಕೊಂಡು ಹೋದರೂ, ಹಣ ತುಂಬಿಕೊಂಡು ಹೋದರೂ ಕೂಡ ಕೇಳುವುದಿಲ್ಲ ಎಂಬಂತಾಗಿದೆ.
ನಮ್ಮ ರಾಜ್ಯಕ್ಕೆ ಬಾಂಬ್ ಸೇರಿ ಏನೇ ತಂದಿಟ್ಟರೂ ಕೂಡ ಅದರ ಬಗ್ಗೆ ತಲೆಕೆಡಿಸಿಕೊಳ್ಳದ ಇಂತಹ ಅಧಿಕಾರಿಗಳು ಏತಕ್ಕಾಗಿ ಇದ್ದಾರೊ ತಿಳಿಯದು.
ರಾಜಾರೋಷವಾಗಿ ಹೋಗುವ ವಾಹನಗಳ ಬಗ್ಗೆ ಅಧಿಕಾರಿಗಳು ಪ್ರಕರಣ ದಾಖಲಿಸುವುದನ್ನು ಬಿಟ್ಟು ಕೈ ಚೆಲ್ಲಿ ಕುಳಿತಿರುವ ಅರ್ಥವಾದರೂ ಏನು ಎಂಬುದು ಸಾರ್ವಜನಿಕರ ಪ್ರಶ್ನೆಯಾಗಿದೆ.
ಗುಂಡ್ಲುಪೇಟೆ ಚೆಕ್ ಪೊಸ್ಟ್ ಅಲ್ಲಿ ತಪಾಸಣೆ ಮಾಡಿದ ಅನತಿ ದೂರದಲ್ಲೆ ಅಬ್ಕಾರಿ ಅದಿಕಾರಿಗಳ ಚೆಕ್ ಪೊಸ್ಟ್ ಕೂಡ ಇದೆ.
ಹಾಗಿಯೆ ಮುಂದೆ ಸಾಗಿದಂತೆ ಅರಣ್ಯ ತನಿಖಾ ತಂಡವೂ ಕೂಡ ಇದೆ. ಚುನಾವಣಾ ಅದಿಕಾರಿಗಳು ಪೊಲೀಸ್, ಆರ್ ಟಿ ಒ,ಗಣಿ ಇಲಾಖಾ ಅದಿಕಾರಿಗಳು, ಅಬ್ಕಾರಿ ಅಧಿಕಾರಿ ಗಳು ಅರಣ್ಯ ಇಲಾಖೆ ಅದಿಕಾರಿಗಳು ಎಲ್ಲರ ಸಹಕಾರದಲ್ಲಿ ಒಂದೆ ಕಡೆ ಚೆಕ್ ಪೋಸ್ಟ್ ಹಾಕಿ ಸಿಬ್ಬಂದಿ ನಿಯೋಜಿಸಿದರೆ ಒಳಿತು.
ಇದರಿಂದ ಮಾನವ ಸಂಪನ್ಮೂಲ ಕೊರತೆ ನೀಗಿಸಬಹುದು ಹಾಗೂ ಕಾನೂನು ಬಾಹಿರ ಚಟುವಟಿಕೆ ತಡೆಯುವ ಜೊತೆಗೆ ಕಟ್ಟುನಿಟ್ಟಾಗಿ ಕರ್ತವ್ಯ ನಿರ್ವಹಿಸಬಹುದು.