ಜಗದೀಶ್ ಶೆಟ್ಟರ್ ಹೈಕಮಂಡ್ ಸೆಡ್ಡು

ಹುಬ್ಬಳ್ಳಿ: ಬಿಜೆಪಿ ಹಿರಿಯ ನಾಯಕ,ಮಾಜಿ ಮುಖ್ಯ ಮಂತ್ರಿ ಜಗದೀಶ್ ಶೆಟ್ಟರ್ ಹೈಕಮಂಡ್ ಸೆಡ್ಡು ಹೊಡೆದಿದ್ದಾರೆ.

ಈ‌ ಬಾರಿಯ ವಿಧಾನಸಭಾ ಚುನಾವಣೆಗೆ ಬಿಜೆಪಿ ‌ಸ್ಪರ್ಧಿಗಳ ಪಟ್ಟಿ ಬಿಡುಗಡೆ ಮಾಡದೆ ಇನ್ನೂ‌ ಮೀನಾಮೇಶ ಎಣಿಸುತ್ತಿದೆ.

ಆದರೆ ಒಂದು ಮೂಲಗಳ ಪ್ರಕಾರ ಹೈಕಮಾಂಡ್ ಹಿರಿಯರಿಗೆ ಚುನಾವಣೆಯಿಂದ ಹಿಂದೆ‌ಸರಿದು ಹೊಸಬರು ಹಾಗೂ ಯುವಕರಿಗೆ ಅವಕಾಶ ಮಾಡಿಕೊಡುವಂತೆ ಹೇಳಿದೆ.

ಇದನ್ನು ಅರಿತೊ ಏನೊ ಕೆ.ಎಸ್.ಈಶ್ವರಪ್ಪ ಚಾನಾವಣೆಯಲ್ಲಿ ಸ್ಪರ್ಧಿಸುವುದಿಲ್ಲ ಎಂದು ರಾಷ್ಟ್ರೀಯ ಅಧ್ಯಕ್ಷ ಜೆ.ಪಿ.ನಡ್ಡಾ ಅವರಿಗೆ ಪತ್ರ ಬರೆದಿದ್ದಾರೆ.

ಆದರೆ ಜಗದೀಶ್ ಶೆಟ್ಟರ್‌ ಒಂದು ಹೆಜ್ಜೆ ಮುಂದೆ ಹೋಗಿ ನನಗೆ ಗೆಲ್ಲುವ‌ ಎಲ್ಲಾ ಅರ್ಹತೆ ಇದೆ.ಹಾಗಾಗಿ ಚುನಾವಣೆಯಿಂದ‌ ಹಿಂದೆ ಸರಿಯುವುದಿಲ್ಲ‌ ಎಂದು ಸ್ಪಷ್ಟವಾಗಿ ತಿಳೆಇಸಿದರು.

ಹುಬ್ಬಳ್ಳಿಯಲ್ಲಿ ಮಂಗಳವಾರ ಸುದ್ದಿಗೋಷ್ಟಿಯಲ್ಲಿ ಮಾತನಾಡಿದ ಅವರು ನಾನು 30 ವರ್ಷಗಳಿಂದ ಪಕ್ಷಕ್ಕಾಗಿ ದುಡಿದಿದ್ದೇನೆ ಆರು ಬಾರಿ ಶಾಸಕನಾಗಿದ್ದೇನೆ.ನನ್ನಲ್ಲಿ ಯಾವ ಮೈನಸ್ ಪಾಯಿಂಟ್ ಕೂಡಾ ಇಲ್ಲ.ಹಾಗಾಗಿ ನಾನೇಕೆ ಚುನಾವಣೆಯಿಂದ ಹಿಂದೆ‌ಸರಿಯಬೇಕು ಎಂದು ಪ್ರಶ್ನಿಸಿದ್ದಾರೆ.

ನನ್ನಲ್ಲೇನು ಮೈನಸ್ ಪಾಯಿಂಟ್ ಇದೆ ಹೇಳಿ.ನಾನು ಚುನಾವಣೆಗೆ ಸ್ಪರ್ಧಿಸುತ್ತೇನೆ ಎಂದು ಕಡಕ್ಕಾಗಿ ಹೇಳಿದರು.