ತೀವ್ರ ಕುತೂಹಲ ಕೆರಳಿಸಿದ್ದ ಬಿಜೆಪಿ ಪಟ್ಟಿ ಬಿಡುಗಡೆ

ನವದೆಹಲಿ: ತೀವ್ರ ಕುತೂಹಲ ಕೆರಳಿಸಿದ್ದ ಭಾರತೀಯ ಜನತಾ ಪಕ್ಷದ ಚುನಾವಣಾ ಅಭ್ಯರ್ಥಿಗಳ ಮೊದಲ ಹಂತದ 189 ಅಭ್ಯರ್ಥಿಗಳ ಪಟ್ಟಿಯನ್ನು ಮಂಗಳವಾರ ರಾತ್ರಿ ಬಿಡುಗಡೆ ಮಾಡಲಾಯಿತು.

ಸುದ್ದಿಗೋಷ್ಠಿಯಲ್ಲಿ ಬಿಜೆಪಿ ರಾಜ್ಯಸಭಾ ಸದಸ್ಯ ಹಾಗೂ ಕರ್ನಾಟಕ ಉಸ್ತುವಾರಿ ಅರುಣ್ ಸಿಂಗ್ ಹಾಗೂ ಕೇಂದ್ರ ಸಚಿವ ಧರ್ಮೇಂದ್ರ ಪ್ರಧಾನ್ ಪಟ್ಟಿಯನ್ನು ಬಿಡುಗಡೆ ಮಾಡಿ ಮಾತನಾಡಿದರು.ಈ ವೇಳೆ ಐಪಿಎಸ್ ಅಧಿಕಾರಿಯಾಗಿದ್ದ ಅಣ್ಣಾ ಮಲೈ ಉಪಸ್ಥಿತರಿದ್ದರು.

ತೀವ್ರ ಕುತೂಹಲ ಕೆರಳಿಸಿದ್ದ ಮೈಸೂರಿನ ವರುಣ ಕ್ಷೇತ್ರದಲ್ಲಿ ಸಚಿವ ಸೋಮಣ್ಣ ಅವರನ್ನು ಸಿದ್ದರಾಮಯ್ಯ ವಿರುದ್ಧ ಕಣಕ್ಕಿಳಿಸಲಾಗುತ್ತಿದೆ. ಜೊತೆಗೆ ಸೋಮಣ್ಣ ಅವರಿಗೆ ಚಾಮರಾಜನಗರದಿಂದಲೂ ಸ್ಪರ್ಧಿಸಲು ಅವಕಾಶ ನೀಡಲಾಗಿದೆ

ಅದೇ ರೀತಿ ಶಿವಮೊಗ್ಗದಿಂದ ಬಿ.ಎಸ್. ಯಡಿಯೂರಪ್ಪ ಅವರ ಪತ್ರ ಬಿ. ವೈ. ವಿಜಯೇಂದ್ರ ಅವರು ಕಣಕ್ಕಿಳಿಯಲಿದ್ದಾರೆ.

ಬಿಜೆಪಿ ಸರ್ಕಾರ ಅಧಿಕಾರಕ್ಕೆ ಬರಲು ಶ್ರಮವಹಿಸಿದ್ದ ರಮೇಶ್ ಜಾರಕಿಹೊಳಿ, ಗೋಕಾಕ್ ನಿಂದ ಸ್ಪರ್ಧಿಸಲಿದ್ದು ಅವರ ಸಹೋದರ ಬಾಲಚಂದ್ರ ಜಾರಕಿಹೊಳಿಗೂ ಟಿಕೆಟ್ ನೀಡಲಾಗಿದೆ.

ಮತ್ತಷ್ಟು ಕುತೂಹಲ ಕೆರಳಿಸಿದ್ದ ಹಾಗೂ ಪ್ರತಿಷ್ಟಿತ ಕ್ಷೇತ್ರಗಳಲ್ಲಿ ಒಂದಾದ ಕನಕಪುರದಿಂದ ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ಅವರಿಗೆ ಠಕ್ಕರ್ ಕೊಡಲು ಸಚಿವ ಆರ್. ಅಶೋಕ್ ಅವರನ್ನು ಕಣಕ್ಕಿಳಿಸಲಾಗುತ್ತಿದೆ.ಜತೆಗೆ ಬೇರೆ ಕ್ಷೇತ್ರದಿಂದಲೂ ಸ್ಪರ್ಧಿಸಲು ಅವಕಾಶ ನೀಡಲಾಗಿದೆ.

ಮೈಸೂರಿನ 11 ಕ್ಷೇತ್ರಗಳ ಪೈಕಿ ಕೃಷ್ಣರಾಜ ಮತ್ತು ಎಚ್ ಡಿ ಕೋಟೆ ಹೊರತುಪಡಿಸಿ ಇನ್ನು 9 ಕ್ಷೇತ್ರಗಳಿಗೆ ಅಭ್ಯರ್ಥಿಗಳ ಹೆಸರನ್ನು ಪ್ರಕಟಿಸಲಾಗಿದೆ.

ಚಾಮುಂಡೇಶ್ವರಿ- ಕವಿಶ್ ಗೌಡ, ಚಾಮರಾಜ- ನಾಗೇಂದ್ರ,ವರುಣ- ಸೋಮಣ್ಣ, ಟಿ ನರಸಿಪುರ- ಡಾ. ರೇವಣ್ಣ, ಪಿರಿಯಾಪಟ್ಟಣ- ಸಿ. ಎಚ್. ವಿಜಯಶಂಕರ್,ಕೆ.ಆರ್.ನಗರ- ವೆಂಕಟೇಶ್ ಹೊಸಳ್ಳಿ, ನರಸಿಂಹರಾಜ- ಸಂದೇಶ ಸ್ವಾಮಿ, ನಂಜನಗೂಡು& ಹರ್ಷವರ್ಧನ್, ಹುಣಸೂರು- ದೇವರಹಳ್ಳಿ ಸೋಮಶೇಖರ್ ಕಣಕ್ಕಿಳಿಯಲಿದ್ದಾರೆ.

ಜಾತಿವಾರು ಟಿಕೆಟ್ ನೀಡಲಾಗಿದ್ದು ಹಿಂದುಳಿದ ವರ್ಗದವರಿಗೆ 32 ಎಸ್ ಸಿ 30 ಎಸ್ ಟಿ 16 ನಿವೃತ್ತ ಐಪಿಎಸ್ ಅಧಿಕಾರಿ ಒಬ್ಬರು ನಿವೃತ್ತ ಐಎಎಸ್ ಅಧಿಕಾರಿ ಹಾಗೂ 8 ಮಂದಿ ವೈದ್ಯರು ಈ ಬಾರಿ ಕಣದಲ್ಲಿದ್ದಾರೆ.