ವರುಣಾದಲ್ಲಿ ರಣತಂತ್ರಕ್ಕೆ ಮುಂದಾದ ಸೋಮಣ್ಣ; ಕಾ.ಪು ಭೇಟಿ ಮಾಡಿ ಚರ್ಚೆ

ಮೈಸೂರುವರುಣಾ ಕ್ಷೇತ್ರದಲ್ಲಿ ಮಾಜಿ ಸಿಎಂ ಸಿದ್ದರಾಮಯ್ಯ ವಿರುದ್ಧ ಸ್ಪರ್ಧಿಗಿಳಿಯುತ್ತಿರುವ ಸಚಿವ ವಿ.ಸೋಮಣ್ಣ ಗೆಲುವು ಸಾಧಿಸುವುದಕ್ಕಾಗಿ ರಣತಂತ್ರ ರೂಪಿಸಿದ್ದಾರೆ.

ಇದರ ಭಾಗವಾಗಿ ಶುಕ್ರವಾರ ಸೋಮಣ್ಣ  ಕ್ಷೇತ್ರಕ್ಕೆ ಭೇಟಿ ನೀಡಿ ಮಾಜಿ ಸಿಎಂ ಬಿ.ಎಸ್. ಯಡಿಯೂರಪ್ಪ ಅವರ ಆಪ್ತ ಕಾ.ಪು ಸಿದ್ದಲಿಂಗಸ್ವಾಮಿ ಅವರನ್ನ ಸಂಪರ್ಕಿಸಿ ಚರ್ಚೆ ನಡೆಸಿದರು.

ವೇಳೆ ಮಾಧ್ಯಮದವರೊಂದಿಗೆ ಮಾತನಾಡಿದ ವಿ. ಸೋಮಣ್ಣ, ಕಾಪು ಸಿದ್ದಲಿಂಗಸ್ವಾಮಿ ನನ್ನ ಸಹೋದರ ಇದ್ದ ಹಾಗೆ,ಹಾಗಾಗಿ ಸಿದ್ದಲಿಂಗಸ್ವಾಮಿಯವರಿಗೆ ಕೆಲವು ಜವಾಬ್ದಾರಿ ನೀಡಿದ್ದೇನೆ ಎಂದು ತಿಳಿಸಿದರು.

ಈಗಿಲಿಂದಲೇ ವರುಣ ಕ್ಷೇತ್ರದಲ್ಲಿ ಪ್ರಚಾರ ಆರಂಭಿಸಿದ್ದೇವೆ. ಒಂದು ವಾರದ ಬಳಿಕ ಕ್ಷೇತ್ರದ ವಾತಾವರಣ ತಿಳಿಯುತ್ತದೆ ಎಂದರು.

ವರುಣಾವನ್ನು ಮತ್ತೊಂದು ಗೋವಿಂದರಾಜ ನಗರ ಮಾಡುವ ಗುರಿ ಹೊಂದಿದ್ದೇನೆ ಎಂದು ಸೋಮಣ್ಣ ತಿಳಿಸಿದರು.