ಸಂಜೆ ಕಾಂಗ್ರೆಸ್ ಸೇರುತ್ತೇನೆ -ಸವದಿ

ಬೆಂಗಳೂರು: ಶುಕ್ರವಾರ ಸಂಜೆ ವಿಧಾನ ಪರಿಷತ್ ಸದಸ್ಯತ್ವಕ್ಕೆ ರಾಜೀನಾಮೆ ನೀಡಿ ಕಾಂಗ್ರೆಸ್ ಪಕ್ಷ ಸೇರುತ್ತಿದ್ದೇನೆ ಎಂದು ಲಕ್ಷ್ಮಣ್ ಸವದಿ ತಿಳಿಸಿದರು.

ಈ ಕುರಿತು ಬೆಂಗಳೂರಿನಲ್ಲಿ ಮಾತನಾಡಿದ ಲಕ್ಷ್ಮಣ್ ಸವದಿ ಸಂಜೆ ಬಿಜೆಪಿಗೂ ರಾಜೀನಾಮೆ ನೀಡುತ್ತೇನೆ ಎಂದು ಸ್ಪಷ್ಟಪಡಿಸಿದರು.

ಅಥಣಿ ಕ್ಷೇತ್ರದಲ್ಲಿ ಟಿಕೆಟ್ ಕೊಡಲಿಲ್ಲ ಟಿಕೆಟ್ ನೀಡಿಲ್ಲ ಎಂದರೆ ಅಲ್ಲಿ ನಾನು ಯಾಕೆ ಇರಬೇಕು

ಬಿಜೆಪಿಯ ಯಾವ ನಾಯಕರನ್ನೂ ಭೇಟಿ ಮಾಡುವುದಿಲ್ಲ,ಮನೆ ಬಿಟ್ಟು ಹೋಗುವ  ಹೊತ್ತಿನಲ್ಲಿ ಯಾಕೆ ಭೇಟಿಯಾಗಲಿ ಎಂದು ಲಕ್ಷ್ಮಣ್ ಸವದಿ ಮಾಧ್ಯಮದವರನ್ನೇ ಪ್ರಶ್ನಿಸಿದರು.

ಪ್ರಶ್ನಯೊಂದಕ್ಕೆ ಉತ್ತರಿಸಿದ ಸವದಿ ಕಾಂಗ್ರೆಸ್ ಸೇರಲು ನಾನು ಯಾವುದೇ ಶರತ್ತು ಹಾಕಿಲ್ಲ,ಅವರೂ ನನಗೆ ಶರತ್ತು ನೀಡಿಲ್ಲ ಎಂದು ತಿಳಿಸಿದರು.

ಕಾಂಗ್ರೆಸ್ ಅಧಿಕಾರಕ್ಕೆ ಬಂದರೆ ಕ್ಷೇತ್ರದಲ್ಲಿ ನೀರಾವರಿಗೆ ಹೆಚ್ಚು ಹಣ ಬಿಡುಗಡೆ ಮಾಡಬೇಕು ಹಾಗೂ ಕ್ಷೇತ್ರದ ಅಭಿವೃದ್ಧಿಗೆ ಮೊದಲ ಆಧ್ಯತೆ ನೀಡಬೇಕೆಂದು ಮನವಿ ಮಾಡಿದ್ದೇನೆ.ಅದಕ್ಕೆ ಕಾಂಗ್ರೆಸ್ ನಾಯಕರು ಒಪ್ಪಿದ್ದಾರೆ ಎಂದು ಲಕ್ಷ್ಮಣ ಸವದಿ ತಿಳಿಸಿದರು.