ಬೆಂಗಳೂರು: ಮನೆಯೊಳಗಿನ ಪೀಡೆ ತೊಲಗಿದಂತಾಯಿತು ಎಂದು ಲಕ್ಷ್ಮಣ ಸವದಿ ಹೆಸರು ಹೇಳದೆ ಶಾಸಕ ರಮೇಶ್ ಜಾರಕಿ ಹೊಳಿ ವಾಗ್ದಾಳಿ ನಡೆಸಿದರು.
ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಅವರು ಲಕ್ಷ್ಮಣ ಸವದಿಗೆ ನಾನು ಪಕ್ಷ ಬಿಡದಂತೆ ಸಾಕಷ್ಟು ಮನವಿ ಮಾಡಿದೆ ಆದರೆ ಆತ ಕೇಳಲಿಲ್ಲ ಎಂದು ವಾಗ್ದಾಳಿ ನಡೆಸಿದರು.
ಹೋಗಿದ್ದು ಒಳ್ಳೆಯದೇ ಆಯಿತು,ಸವದಿಗೆ ಬಿಜೆಪಿ ಎಲ್ಲವನ್ನೂ ಕೊಟ್ಟಿತ್ತು.ಆತ ಸೋತಿದ್ದರೂ ಉಪ ಮುಖ್ಯ ಮಂತ್ರಿ ಮಾಡಲಾಗಿತ್ತು,ಬಿಜೆಪಿಯಲ್ಲಿ ಅಧಿಕಾರ ಅನುಭವಿಸಿ ಈಗ ಟಿಕೆಟ್ ಸಿಗದಕ್ಕೆ ಕಾಂಗ್ರೆಸ್ ಪಕ್ಷಕ್ಕೆ ಹೋಗಿದ್ದಾರೆ ಎಂದು ಕಿಡಿಕಾರಿದರು.
ಉದ್ದದ ಜುಬ್ಬದ ವ್ಯಕ್ತಿ ಹೋಗಿದ್ದು ಒಳ್ಳೆಯದೆ ಆಯಿತು, ನಷ್ಟ ಅವರಿಗೇ ಹೊರತು ನಮ್ಮ ಪಕ್ಷಕ್ಕಲ್ಲ ಎಂದು ತಿಳಿಸಿದರು.