ಎಸ್ ಡಿ ಪಿ ಐ, ಕೆ ಎಫ್ ಡಿ, ಪಿ ಎಫ್ ಐ ನವರು ಸಿದ್ಧು ದತ್ತು ಪುತ್ರರು :ಸಿಂಹ

ಮೈಸೂರು : ರಾಜ್ಯದಲ್ಲಿ ಬಿಜೆಪಿ ಮತ್ತೊಮ್ಮೆ ಅಧಿಕಾರಕ್ಕೆ ಬರುವುದು ಖಚಿತ ಹಾಗಾಗಿ ಕಾಂಗ್ರೆಸ್ ನಾಯಕರು ಮುಸ್ಲಿಮರ ಓಲೈಕೆ ಮುಂದುವರಿಸಿದ್ದಾರೆ ಎಂದು ಸಂಸದ ಪ್ರತಾಪ್ ಸಿಂಹ ವಾಗ್ದಾಳಿ ನಡೆಸಿದರು.

ಮೈಸೂರಿನಲ್ಲಿ ಶನಿವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು,ಚುನಾವಣೆಯಲ್ಲಿ ಗೆಲ್ಲಲು ಎಸ್ ಡಿ ಪಿ ಐ ಬೆಂಬಲ ಕೇಳಲು ಕಾಂಗ್ರೆಸ್ ಮುಂದಾಗಿದೆ ಎಂದು ಟೀಕಿಸಿದರು.

ಎಸ್ ಡಿ ಪಿ ಐ ನ ಮೂಲ ಸಂಸ್ಥೆಗಳಾದ ಸಿಮಿ ಹಾಗು ಪಿಎಫ್ಐ ಸಂಘಟನೆಗಳನ್ನು ನಿಷೇಧಿಸಲಾಗಿದೆ. ಅಂತಹ ಎಸ್ ಡಿ ಪಿ ಐ ಜೊತೆ ಕೈ ಜೋಡಿಸಲು ಕಾಂಗ್ರೆಸ್ ಮುಂದಾಗಿರುವುದು ಶೋಚನೀಯ ಎಂದರು

ಕ್ಯಾತಮಾರನಹಳ್ಳಿ ರಾಜು ಹತ್ಯೆ ಹಾಗು ಹುಣಸೂರಿನ ಇಬ್ಬರು ಯುವಕರನ್ನು ಹತ್ಯೆ ಮಾಡಿದ ವಿಚಾರ ಪ್ರಸ್ತಾಪಿಸಿ,ಎಸ್ ಡಿ ಪಿ ಐ ವಿರುದ್ಧ ದಾಖಲಾಗಿದ್ಧ ಪ್ರಕರಣಗಳನ್ನು ಸಿದ್ಧರಾಮಯ್ಯ ಸರ್ಕಾರ ವಾಪಸ್ ಪಡೆದುಕೊಂಡಿತು.

ಅದರ ಪರಿಣಾಮ ಹಿಂದೂ ಸಂಘಟನೆಗಳ ಮುಖಂಡರು ಹಾಗು ಯುವಕರ ಸರಣಿ ಹತ್ಯೆಯಾಯಿತು ಎಂದು ಕಿಡಿಕಾರಿದರು..

ಎಸ್ ಡಿ ಪಿ ಐ ಹಾಗು ಕೆ ಎಫ್ ಡಿ, ಪಿ ಎಫ್ ಐ ನವರು ಸಿದ್ಧರಾಮಯ್ಯನವರಿಗೆ ದತ್ತು ಪುತ್ರರಾಗಿದ್ಧಾರೆ ಎಂದು ವ್ಯಂಗ್ಯ ವಾಡಿದರು.

ಕಾಂಗ್ರೆಸ್ ನಾಯಕರು ಎಸ್ ಡಿ ಪಿ ಐ ಬೆಂಬಲ ಕೇಳುವ ಮೂಲಕ ತಾಲಿಬಾನ್ ಸರ್ಕಾರ ತರಲು ಹೊರಟಿದ್ಧಾರೆ.

ಅಧಿಕಾರಕ್ಕೋಸ್ಕರ ಏನು ಬೇಕಾದರೂ ಮಾಡಲು ಸಿದ್ದವೆಂಬ ಕಾಂಗ್ರೆಸ್ ನಾಯಕರ ನಿಲುವನ್ನು ನಾನು ಖಂಡಿಸುತ್ತೇನೆ ಎಂದು ಪ್ರತಾಪ್ ಸಿಂಹ ಹೇಳಿದರು.