ಮೈಸೂರು: ಫಸ್ಟ್ ಕ್ರೈ ಇಂಟೆಲಿಟಾಟ್ಸ್ ಪ್ರಿಸ್ಕೂಲ್ ನಲ್ಲಿ ಮಕ್ಕಳಿಗೆ ಅನುಕೂಲಕರ ವಾತಾವರಣ ನಿರ್ಮಿಸಲಾಗಿದೆ ಎಂದು ಶಾಲೆಯ ಮುಖ್ಯಸ್ಥೆ ಮೇಘಶ್ರೀ ತಿಳಿಸಿದರು.
ಮೈಸೂರಿನ ವಿಜಯನಗರದ ಹೆಬ್ಬಾಳದ ಮೂರನೇ ಹಂತದಲ್ಲಿ ನೂತನವಾಗಿ ಫಸ್ಟ್ ಕ್ರೈ ಇಂಟೆಲಿಟಾಟ್ಸ್ ಪ್ರಿಸ್ಕೂಲ್ ಭಾನುವಾರ ಉದ್ಘಾಟನೆ ಶುಭಾರಂಭಗೊಂಡಿದ್ದು ಈ ವೇಳೆ ಅವರು ಮಾತನಾಡಿದರು.
ಶಾಲೆಯನ್ನು ವ್ಯವಸ್ಥಿತವಾಗಿ ರೂಪಿಸಲಾಗಿದೆ ಮಕ್ಕಳಿಗೆ ಅನುಕೂಲಕರವಾಗಿದೆ ಹಾಗೂ ಅತ್ಯತ್ತಮವಾಗಿದೆ ಎಂದು ಹೇಳಿದರು.
ಚಿಕ್ಕಮಗುವನ್ನು ಮನೆಯಿಂದ ಆಚೆ ಕಳಿಸಿದಾಗ ಅವರೆಷ್ಟು ಸುರಕ್ಷಿತರಾಗಿರುತ್ತಾರೆ, ಕಂಪರ್ಟಬಲ್ ಆಗಿರುತ್ತಾರೆ, ಹೇಗೆ ಸಂತೋಷವಾಗಿರುತ್ತಾರೆ ಎಂಬ ಆತಂಕ ಮನೆಯವರಲ್ಲಿ ಇದ್ದೇ ಇರುತ್ತದೆ.
ಪೋಷಕರು ಯಾವುದೇ ಆತಂಕಕ್ಕೊಳಗಾಗದೆ ಶಾಲೆಗೆ ಕಳುಹಿಸಬಹುದು ಅಂತಹ ವಾತಾವರಣ ಇಲ್ಲಿದೆ ಎಂದು ಭರವಸೆ ನೀಡಿದರು.
ಶೈಕ್ಷಣಿಕ ದಕ್ಷಿಣ ವಲಯ ಮುಖ್ಯಸ್ಥೆ ಆಯಿಷಾಖಾನ್ ಅವರು ಫಸ್ಟ್ ಕ್ರೈ ಇಂಟೆಲಿಟಾಟ್ಸ್ ಪ್ರಿಸ್ಕೂಲ್ ಚೆನ್ನಾಗಿ ಮುಂದುವರಿಯಲಿ ಶಾಲೆಗೆ ಒಳ್ಳೆಯದಾಗಲಿ ಎಂದು ಶುಭ ಹಾರೈಸಿದರು.
ಇಲ್ಲಿ ಮಕ್ಕಳಲ್ಲಿ ಕ್ರಿಯಾಶೀಲತೆ, ಆತ್ಮವಿಶ್ವಾಸವನ್ನು ಬೆಳೆಸಲಾಗುತ್ತದೆ. ದೇಶದಲ್ಲಿ ಈ ಶಾಲೆಯ 150ಕ್ಕೂ ಅಧಿಕ ಶಾಖೆಗಳಿವೆ.
ಮೈಸೂರಿನಲ್ಲಿ ನೂತನ ಶಾಖೆಯನ್ನು ತೆರೆದಿದ್ದೇವೆ. ಮಕ್ಕಳಿಗೆ ಸುರಕ್ಷತೆಯ ವಾತಾವರಣವನ್ನು ನೀಡಲಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.
ಮಕ್ಕಳ ಪ್ರವೇಶಾತಿ ನೊಂದಣಿಗೆ ಮೊ.ಸಂ. 7795168855 ನ್ನು ಸಂಪರ್ಕಿಸಬಹುದು.