ಲಿವಿಂಗ್ ಟುಗೆದರ್ ನಲ್ಲಿದ್ದ ಮಹಿಳೆ ಕೊಲೆ

ಮೈಸೂರು: ಪತಿಯಿಂದ ವಿಚ್ಛೇದನ ಪಡೆದು ಪ್ರಿಯಕರನೊಂದಿಗೆ ಲಿವಿಂಗ್ ಟುಗೆದರ್ ನಲ್ಲಿದ್ದ ಮಹಿಳೆ ಕೊಲೆಯಾದ ಘಟನೆ ಮೈಸೂರಿನಲ್ಲಿ ನಡೆದಿದೆ.

ಸೌಮ್ಯ(27) ಕೊಲೆಯಾಗಿರುವ ಮಹಿಳೆ.

ವಿವಿ ಪುರಂ ಪೊಲೀಸ್ ಠಾಣಾ ವ್ಯಾಪ್ತಿಯ ನಂದಗೋಕುಲ ಬಡಾವಣೆಯಲ್ಲಿ ಈ ಘಟನೆ ನಡೆದಿದೆ.

ಪತಿಯಿಂದ ವಿಚ್ಛೇದನ ಪಡೆದಿದ್ದ ಸೌಮ್ಯ  ಟೈಲರಿಂಗ್ ಮಾಡಿಕೊಂಡು ಜೀವನ ನಡೆಸುತ್ತಿದ್ದರು.

ಕ್ಯಾಬ್ ಡ್ರೈವರ್ ರಮೇಶ್ ಎಂಬಾತನ ಪರಿಚಯವಾಗಿ ಅದು ಸಲಿಗೆಗೆ ತಿರುಗಿ ಸೌಮ್ಯ ಆತನೊಂದಿಗೆ ಲಿವಿಂಗ್ ಟುಗೆದರ್ ನಲ್ಲಿದ್ದರು.

ಅಲ್ಲದೆ ರಮೇಶ್ ಜೊತೆ ವಿವಾಹವಾಗಲು ಸಿದ್ದತೆ ಕೂಡಾ ನಡೆಸಿದ್ದರು.

ಆದರೆ ಭಾನುವಾರ ಬೆಳಿಗ್ಗೆ ಸೌಮ್ಯ ರಕ್ತದ ಮಡುವಿನಲ್ಲಿ ಬಿದ್ದಿರುವುದು ಕಂಡು ಬಂದಿದೆ.

ಆಕೆಯ ತಲೆಗೆ ಬಲವಾದ ಆಯುಧದಿಂದ ಹಲ್ಲೆ ನಡೆಸಿ ಕೊಲೆ ಮಾಡಲಾಗಿದೆ.

ಪ್ರಕರಣ ಸಂಬಂಧ ಪ್ರಿಯಕರ ರಮೇಶ್ ನನ್ನು ವಶಕ್ಕೆ ಪಡೆದು ಪೊಲೀಸರು ವಿಚಾರಣೆ ನಡೆಸುತ್ತಿದ್ದಾರೆ.