ನವದೆಹಲಿ: ಬಹಳ ಕುತೂಹಲ ಮೂಡಿಸಿದ್ದ ಮೈಸೂರಿನ ಕೆ.ಆರ್.ಕ್ಷೇತ್ರಕ್ಕೆ ಅಳೆದು ತೂಗಿ ಬಿಜೆಪಿ ತನ್ನ ಅಭ್ಯರ್ಥಿಯ ಹೆಸರು ಘೋಷಣೆ ಮಾಡಿದ್ದು,ಹಾಲಿ ಶಾಸಕ ಎಸ್.ಎ.ರಾಮದಾಸ್ ಕನಸು ಭಗ್ನವಾಗಿದೆ.
ನನಗೆ ವಿಶ್ವಾಸವಿದೆ, ಕೊನೆತನಕ ಕಾಯೋಣ ತಾಳ್ಮೆಯಿಂದ ಇರಿ ಎಂದು ರಾಮದಾಸ್ ತಮ್ಮ ಕಾರ್ಯಕರ್ತರು, ಅಭಿಮಾನಿಗಳಿಗೆ ಹೇಳಿದ್ದರು.
ಟಿಕೆಟ್ ಕೊನೆಗೂ ಅನೌನ್ಸ್ ಆಗಿದೆ,ರಾಮದಾಸ್ ಗೆ ಟಿಕೆಟ್ ಕೈತಪ್ಪಿದೆ.
ಈ ಕ್ಷೇತ್ರದಲ್ಲಿ ಮುಡಾ ಮಾಜಿ ಅಧ್ಯಕ್ಷ ರಾಜೀವ್ ಹೆಸರು ಕೂಡಾ ಕೇಳಿ ಬಂದಿತ್ತು.
ಆದರೆ ಬಿಜೆಪಿ ಹೈಕಮಾಂಡ್ ಕೆ.ಆರ್.ಕ್ಷೇತ್ರದ ಬಿಜೆಪಿ ಟಿಕೆಟ್ ಅನ್ನು ಮೈಸೂರು ನಗರ ಅಧ್ಯಕ್ಷ ಶ್ರೀವತ್ಸ ಅವರಿಗೆ ನೀಡಿ ಅಚ್ಚರಿ ಮೂಡಿಸಿದೆ.
ಇನ್ನು ಉಳಿದಂತೆ ಬಿಜೆಪಿ ತನ್ನ ಮೂರನೆ ಪಟ್ಟಿ ಬಿಡುಗಡೆ ಮಾಡಿದ್ದು,ಬೆಂಗಳೂರಿನ ಮಹದೇವಪುರ ಕ್ಷೇತ್ರದಲ್ಲಿ ಅರವಿಂದ ಲಿಂಬಾವಳಿಗೆ ಟಿಕೆಟ್ ನೀಡುವ ಬದಲು ಅವರ ಪತ್ನಿ ಮಂಜುಳಾಗೆ ನೀಡಲಾಗಿದೆ.
ಬೆಂಗಳೂರಿನ ಹೆಬ್ಬಾಳದಲ್ಲಿ ಕಟ್ಟಾ ಸುಬ್ರಹ್ಮಣ್ಯ ನಾಯ್ಡು ಬದಲು ಕಟ್ಟಾ ಜಗದೀಶ್ ಗೆ, ಗೋವಿಂದರಾಜ ನಗರದಲ್ಲಿ ಉಮೇಶ್ ಶೆಟ್ಟಿಗೆ,
ನಾಗಟಾಣ-ಸಂಜೀವ್ ಐಹೊಳೆ,ಸೇಡಂ-ರಾಜ್ ಕುಮಾರ್ ಪಾಟೀಲ್,ಕೊಪ್ಪಳ-ಮಂಜುಳಾ ಅಮರೇಶ್,ರೋಣ-ಕಳಕಪ್ಪ ಬಂಡಿ,ಹುಬ್ಬಳ್ಳಿ-ಧಾರವಾಡ ಸೆಂಟ್ರಲ್-ಮಹೇಶ್ ಟೆಂಗಿನಕಾಯಿ,ಹಗರಿ ಬೊಮ್ಮನ ಹಳ್ಳಿ-ಬಿ. ರಾಮಣ್ಣ ಅವರಿಗೆ ಟಿಕೆಟ್ ನೀಡಲಾಗಿದೆ.