(ವರದಿ:ರಾಮಸಮುದ್ರ ಎಸ್.ವೀರಭದ್ರಸ್ವಾಮಿ)
ಚಾಮರಾಜನಗರ: ಬಿಜೆಪಿ ಮುಖಂಡನ ಮನೆ ಹಾಗೂ ಸ್ಕೂಟರ್ ಷೋರೂಂ ಮೇಲೆ ಬೆಳಂಬೆಳಿಗ್ಗೆ ಸೆಕ್ಟರ್ ಮ್ಯಾಜಿಸ್ಟ್ರೇಟ್ ಅದಿಕಾರಿಗಳ ತಂಡ ದಾಳಿ ನಡೆಸಿದೆ.
ಮೈಸೂರಿನಿಂದ ಚಾಮರಾಜನಗರಕ್ಕೆ ಆಗಮಿಸಿದ ೯ ಜನ ಅದಿಕಾರಿಗಳ ತಂಡ ಬೆಳಿಗ್ಗೆ ೬ ಗಂಟೆಗೆ ಏಕಕಾಲದಲ್ಲಿ ದಾಳಿ ನಡೆಸಿತು.
ಬಿಜೆಪಿ ಮುಖಂಡ ವೃಷಬೇಂದ್ರ ಅವರಿಗೆ ಷೋರೂಂ ಸೇರಿದ್ದು ಸೋಮಣ್ಣನ ಆಪ್ತ ಎಂದು ತಿಳಿದುಬಂದಿದೆ.
ಚುನಾವಣಾ ಆಯೋಗದಲ್ಲಿ ದಾಖಲಾದ ದೂರಿನ ಅನ್ವಯ ಸೆಕ್ಟರ್ ಮ್ಯಾಜಿಸ್ಟ್ರೇಟ್ ರ ತಂಡ ಭ್ರಮರಾಂಭ ಬಡಾವಣೆಯಲ್ಲಿರುವ ನಿವಾಸ ಹಾಗೂ ಜೋಡಿರಸ್ತೆಯಲ್ಲಿರುವ ಬಜಾಜ್ ಷೊರೂಂ ಮೇಲೆ ದಾಳಿ ನಡೆಸಿ ವಿಚಾರಣೆ ನಡೆಸುತ್ತಿದೆ.