ಮೈಸೂರು: ಕಳೆದು ಹೋದ ಮೊಬೈಲ್ ಪತ್ತೆ ಹಾಗೂ ದುರ್ಬಳಕೆ ತಡೆಯಲು ಮೈಸೂರು ನಗರ ಪೊಲೀಸರು ನೂತನ ತಂತ್ರಜ್ಞಾನ ವ್ಯವಸ್ಥೆಯನ್ನು ಜಾರಿಗೆ ತಂದಿದ್ದಾರೆ.
ನೂತನ ತಂತ್ರಜ್ಞಾನ ಇ ಪೋರ್ಟಲ್ ಅನ್ನು ನಗರ ಪೊಲೀಸ್ ಆಯುಕ್ತರ ಕಚೇರಿಯಲ್ಲಿ ಬೆಂಗಳೂರು ನಗರದ ಡಿ.ಜಿ ಹಾಗೂ ಐಜಿಪಿ ಪ್ರವೀಣ್ ಸೂದ್ ಚಾಲನೆ ನೀಡಿದರು.
ಹೊಸ ತಂತ್ರಜ್ಞಾನದಲ್ಲಿ 63632-55135 ಮೊಬೈಲ್ ಸಂಖ್ಯೆಗೆ Hi ಎಂದು Text message ಮಾಡಿದರೆ ಲಿಂಕ್ ಬರುತ್ತದೆ.
ಲಿಂಕ್ ಓಪನ್ ಮಾಡಿ ನಂತರ ಕೇಳಲಾದ ಮಾಹಿತಿಯನ್ನ ಭರ್ತಿಮಾಡಬೇಕು.ಆನಂತರ ಪೊಲೀಸರು ಕಳುವಾದ ಮೊಬೈಲ್ ಪತ್ತೆಗೆ ಕ್ರಮ ಕೈಗೊಳ್ಳುತ್ತಾರೆ.
ಕಾರ್ಯಕ್ರಮದಲ್ಲಿ ನಗರ ಪೊಲೀಸ್ ಆಯುಕ್ತರಾದ ಬಿ.ರಮೇಶ್,ದಕ್ಷಿಣವಲಯ ಐಜಿಪಿ ಪ್ರವೀಣ್ ಮಧುಕರ್ ಪವಾರ್, ಕಾನೂನು ಸುವ್ಯವಸ್ಥೆ ಡಿಸಿಪಿ ಮುತ್ತುರಾಜ್,ಅಪರಾಧ ಮತ್ತು ಸಂಚಾರ ಡಿಸಿಪಿ ಜಾಹ್ನವಿ ಭಾಗವಹಿಸಿದ್ದರು.