ವೇಶ್ಯಾವಾಟಿಕೆ ನಡೆಸುತ್ತಿದ್ದ ಮನೆ ಮೇಲೆ‌ ದಾಳಿ: 6 ಯುವತಿಯರ ರಕ್ಷಣೆ

ಮೈಸೂರು: ಸಿಸಿಬಿ ಪೊಲೀಸರು ಮೈಸೂರಿನ ಕಾಳಿದಾಸ ರಸ್ತೆ 8ನೇ ಕ್ರಾಸ್ ನಲ್ಲಿ‌ ವೇಶ್ಯಾವಾಟಿಕೆ ನಡೆಸುತ್ತಿದ್ದ ಮನೆಯೊಂದರ ಮೇಲೆ ದಾಳಿ ನಡೆಸಿ 6 ಯುವತಿಯರನ್ನ ರಕ್ಷಿಸಿದ್ದಾರೆ.

ವೇಶ್ಯಾವಟಿಕೆ ದಂಧೆ ನಡೆಸುತ್ತಿದ್ದ ಇಬ್ಬರು ವ್ಯಕ್ತಿಗಳನ್ನು ಬಂಧಿಸಿ 9 ಸಾವಿರ ರೂಗಳನ್ನು ವಶಕ್ಕೆ ಪಡೆದಿದ್ದಾರೆ.

ಅಪರಾಧ ಮತ್ತು ಸಂಚಾರ ವಿಭಾಗದ ಡಿಸಿಪಿ ಎಸ್.ಜಾಹ್ನವಿ ಅವರ ಮಾರ್ಗದರ್ಶನದಲ್ಲಿ ಹಾಗೂ ಸಿಸಿಬಿ ಎಸಿಪಿ ಸಂದೇಶ್ ಕುಮಾರ್ ನೇತೃತ್ವದಲ್ಲಿ ಪಿಐ ಅನೂಪ್ ಮಾದಪ್ಪ, ಪಿಎಸ್ಸೈಗಳಾದ ಪ್ರತಿಭಾ ಜಂಗವಾಡ,ರಾಜು ಕೋನಕೇರಿ ಎಎಸ್ಸೈ ರಾಜು,ಸಿಬ್ಬಂದಿಗಳಾದ ಜೋಸೆಫ್ ನರೋನ್ಹ, ಮಂಜುನಾಥ, ಗುರುಪ್ರಸಾದ್, ಪುರುಷೋತ್ತಮ್, ಅರುಣ್ ಕುಮಾರ್, ಸುಭಾನಲ್ಲಾ ಭಾಲದಾರ,ಪುಟ್ಟಮ್ಮ, ಮಮತ, ಶ್ರೀನಿವಾಸ್ ಕಾರ್ಯಾಚರಣೆಯಲ್ಲಿ ಪಾಲ್ಗೊಂಡಿದ್ದರು.