ಮೈಸೂರು: ವಿಧಾನಸಭೆ ಚುನಾವಣೆ ಪ್ರಚಾರಕ್ಕೆ ಪ್ರಧಾನಿಯನ್ನಾದರೂ ಕರೆಸಿಕೊಳ್ಳಲಿ, ಅಮೇರಿಕಾ ಅಧ್ಯಕ್ಷರನ್ನಾದರೂ ಕರೆಸಿಕೊಳ್ಳಲಿ ಅದರಿಂದ ನಮಗೆ ಆತಂಕ ಇಲ್ಲ ಎಂದು ಮಾಜಿ ಮಖ್ಯ ಮಂತ್ರಿ ಎಚ್.ಡಿ.ಕುಮಾರಸ್ವಾಮಿ ಹೇಳಿದರು.
ಚಾಮುಂಡಿಬೆಟ್ಟಕ್ಕೆ ಭೇಟಿ ನೀಡಿ ದೇವಿ ಚಾಮುಂಡೇಶ್ವರಿಯ ದರ್ಶನ ಪಡೆದು ವಿಶೇಷ ಪೂಜೆ ಸಲ್ಲಿಸಿ ನಂತರ ಮಾಧ್ಯಮ ಪ್ರತಿನಿಧಿಗಳೊಂದಿಗೆ ಅವರು ಮಾತನಾಡಿದರು.
ಯಾರೆ ಬರಲಿ ಒಂದು ದಿನ ಭಾಷಣ ಮಾಡಿ ಹೋಗಬಹುದು,ಚನ್ನಪಟ್ಟಣಕ್ಕೆ ಮಂಡ್ಯ, ತುಮಕೂರು, ಮೈಸೂರಿನಿಂದ ಜನ ಕರೆಸಬಹುದು,ಒಂದು ದಿನ ಜಾತ್ರೆ ಮಾಡಿ ಹೋಗ್ತಾರೆ,ಯಾರದ್ದೋ ದುಡ್ಡು ಯಲ್ಲಮ್ಮನ ಜಾತ್ರೆ ಆಗಿದೆ ಇವರ ಕಥೆ ಎಂದು ಟೀಕಿಸಿದರು.
ಜನ ಸೇರಿಸಿ ಜಾತ್ರೆ ಮಾಡಿದ್ದಾರೆಯೇ ಹೊರತು ಜನಕ್ಕೆ ಅನುಕೂಲ ಆಗುವ ಕಾರ್ಯಕ್ರ ಮಾಡ್ತಾರಾ, ಚುನಾವಣೆ ಹೊತ್ತಿನಲ್ಲಿ ಬರ್ತಾರೆ ಹೋಗ್ತಾರೆ ಸುಮ್ಮನೆ ಜನರಿಗೆ ತೊಂದರೆ ಅಷ್ಟೆ ಎಂದು ಬೇಸರ ವ್ಯಕ್ತಪಡಿಸಿದರು.
ಬಿಜೆಪಿ, ಕಾಂಗ್ರೆಸ್ ರೋಡ್ ಶೋಗಳು ಏನೇನು ಇಲ್ಲ,ನನ್ನ ಕಾರ್ಯಕ್ರಮದ ವಿಶೇಷತೆಗಳೇ ಬೇರೆಯಾಗಿತ್ತು,ನಮಗೆ ಸರಿಸಾಟಿ ಅಲ್ಲ ಎಂದು ಎಂದರು ಎಚ್ ಡಿ ಕೆ
ಮಾಜಿ ಸಿಎಂ ಸಿದ್ದರಾಮಯ್ಯ ಲಿಂಗಾಯತ ಮುಖ್ಯಮಂತ್ರಿ ಸಂಬಂಧ ಹೇಳಿಕೆ ವಿಚಾರದ ಬಗ್ಗೆ ಮಾಧ್ಯಮದವರ ಪ್ರಶ್ನೆಗೆ ಅದೆಲ್ಲ ದೊಡ್ಡವರ ವಿಚಾರ ನಮಗ್ಯಾಕೆ ಎಂದು ಎಂದು ಹೇಳಿದರು.
ವೈದ್ಯರು ಮೂರು ದಿನ ವಿಶ್ರಾಂತಿ ಪಡೆಯಲು ಸೂಚಿಸಿದ್ದಾರೆ,ಆದರೆ ನಾನು ವಿಶ್ರಾಂತಿ ಪಡೆಯುವ ಸ್ಥಿತಿಯಲ್ಲಿ ಇಲ್ಲ, ಕೆಲಸದ ಒತ್ತಡ ಇದೆ,ಇವತ್ತಿನಿಂದ ಮೇ 8 ರವರೆಗೆ ನಿರಂತರ ಪ್ರಚಾರ ನಡೆಸುತ್ತೇನೆ ಎಂದು ಇದೇ ವೇಳೆ ಕುಮಾರಸ್ವಾಮಿ ತಿಳಿಸಿದರು.
ನನ್ನ ಆರೋಗ್ಯದ ಬಗ್ಗೆ ದೇವೇಗೌಡರಿಗೆ ಸ್ವಲ್ಪ ಆತಂಕ ಇದೆ. ಸೋಮವಾರ ಬಿಸಿಲಿನಲ್ಲಿ ಶಿರಾ, ಮಧುಗಿರಿ ಕೊರಟಗೆರೆ ಸಭೆಗಳಲ್ಲಿ ಅವರು ಭಾಗಿಯಾಗಿದ್ದಾರೆ,ಇವತ್ತು ಪಿರಿಯಾಪಟ್ಟಣ, ಕೆ.ಆರ್.ನಗರಕ್ಕೆ ಹೊರಟಿದ್ದಾರೆ,123 ಕ್ಷೇತ್ರಗಳ ಗುರಿ ಮುಟ್ಟಲು ಇಳಿ ವಯಸ್ಸಲ್ಲಿ ಅವರು ಶ್ರಮ ಹಾಕುತ್ತಿದ್ದಾರೆ ಅದು ನಮಗೂ ಆತಂಕವೇ, ಆದರೂ ಅವರು ನಮಗೆ ಸ್ಪೂರ್ತಿ ಎಂದು ಎಚ್ ಡಿ ಕೆ ಹೇಳಿದರು.
ಅಮಿತ್ ಶಾ, ಪ್ರಿಯಾಂಕ ಆಟ ರಾಜ್ಯದಲ್ಲಿ ನಡೆಯುವುದಿಲ್ಲ,ಕಾಂಗ್ರೆಸ್ , ಬಿಜೆಪಿಗಿಂತ ನಮ್ಮ ಜೆಡಿಎಸ್ ಸ್ಥಾನ ದೊಡ್ಡದಿರುತ್ತದೆ ಎಂದು ಹೇಳಿದರು.
ಕನ್ನಡ ನಾಡಿಗೆ ಅವರಿಬ್ಬರ ಕೊಡುಗೆ ಏನು ಇಲ್ಲ.ಅಮಿತ್ ಶಾ ಗೆ ರಾಜ್ಯದಲ್ಲಿ ಜನಬೆಂಬಲ ವ್ಯಕ್ತವಾಗುತ್ತಿಲ್ಲ.ಅವರ ಮೆರವಣಿಗೆಗೆ ಹೆಚ್ಚಿನ ಜನರು ಬರುತ್ತಿಲ್ಲ.
ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಕೂಡ ಜನಬೆಂಬಲ ಕಳೆದುಕೊಂಡಿದ್ಧಾರೆ ಈ ಬಾರಿ ಅವರ ಆಟ ನಡೆಯಲ್ಲ ಎಂದು ತಿರುಗೇಟು ನೀಡಿದರು.
ಜೆಡಿಎಸ್ ಯಾರೊಂದಿಗೂ ಒಳಒಪ್ಪಂದ ಮಾಡಿಕೊಂಡಿಲ್ಲ,ಹೊಸದಾಗಿ ಪಕ್ಷಕ್ಕೆ ಬಂದಿರುವವರ ಪೈಕಿಯೇ 20 ಮಂದಿ ಗೆಲ್ಲಲಿದ್ದಾರೆ,ನಾವು ಇಟ್ಟಿರುವ ನಿಗದಿತ ಗುರಿ ತಲುಪಿ ಯಾರ ಹಂಗು ಇಲ್ಲದೇ ಸರ್ಕಾರ ರಚಿಸಲಿದ್ದೇವೆ ಎಂದು ಹೆಚ್ ಡಿ ಕುಮಾರಸ್ವಾಮಿ ಹೇಳಿದರು.