ಮೈಲಾರಿ ಹೊಟೇಲ್ ಇಡ್ಲಿ ಸವಿದ ಪ್ರಿಯಾಂಕಾ ಗಾಂಧಿ (Video)

ಮೈಸೂರು, ಏ. 26- ಪ್ರಿಯಾಂಕಾ ಗಾಂಧಿ ಅವರು ಸವಿ ರುಚಿಯಾದ ಇಡ್ಲಿಯನ್ನು ಸೇವಿಸಿದರು.

ಮೈಸೂರಿನ ಅಗ್ರಹಾರದಲ್ಲಿರುವ ಮೈಲಾರಿ ಹೊಟೇಲ್ ಗೆ ಬುಧವಾರ ಬೆಳಗ್ಗೆ ಪ್ರಿಯಾಂಕಾ ಗಾಂಧಿ ಅವರು ಭೇಟಿ ನೀಡಿ ಅಲ್ಲಿನ ವಿಶೇಷ ತಿಂಡಿ ಇಡ್ಲಿಯನ್ನು ಸವಿದು ಸಂತಸ ವ್ಯಕ್ತಪಡಿದಸಿದರು.

 ಪ್ರಿಯಾಂಕಾ ಗಾಂಧಿ ಅವರೊಂದಿಗೆ ಎಐಸಿಸಿ ಪ್ರಧಾನ ಕಾರ್ಯದರ್ಶಿ ಹಾಗೂ ಕರ್ನಾಟಕದ ಕಾಂಗ್ರೆಸ್ ಉಸ್ತುವಾರಿ ರಣದೀಪ್ ಸಿಂಗ್  ಸುರ್ಜೆವಾಲ, ಕೆಪಿಸಿಸಿ ಅಧ್ಯಕ್ಷ ಡಿ. ಕೆ. ಶಿವಕುಮಾರ್ ಅವರುಗಳು ಸಹ ಇಡ್ಲಿ ಸವಿದರು.

ಪ್ರಿಯಾಂಕಾ ಗಾಂಧಿ ಅವರು ಹೊಟೇಲ್ ಗೆ ಬರುತ್ತಿದ್ದಂತೆ ಅಗ್ರಹಾರದ ಜನತೆ ಹೊಟೇಲ್ ಬಳಿ ಬಂದು ಹರ್ಷ ವ್ಯಕ್ತಪಡಿಸಿದರು.

ಈ ಸಂದರ್ಭದಲ್ಲಿ ಪ್ರಿಯಾಂಕಾ ಗಾಂಧಿ ಅವರು ಜನರತ್ತ ಕೈ ಬೀಸಿ ಖುಷಿಪಟ್ಟರು.