ಬೆಂಗಳೂರು: ಸ್ಯಾಂಡಲ್ವುಡ್ನಲ್ಲಿ ಡ್ರಗ್ಸ್ ಸೇವಿಸುವ 10ರಿಂದ 15 ಮಂದಿ ಹೆಸರನ್ನು ಪೆÇಲೀಸರಿಗೆ ಹೇಳಿದ್ದೇನೆ ಎಂದು ಚಿತ್ರ ನಿರ್ದೇಶಕ ಇಂದ್ರಜಿತ್ ಲಂಕೇಶ್ ತಿಳಿಸಿದರು.
ಸೋಮವಾರ ಇಂದ್ರಜಿತ್ ಲಂಕೇಶ್ ಡ್ರಗ್ಸ್ ಬಳಸುವವರ ಕುರಿತು ಸಿಸಿಬಿ ಪೊಲೀಸರಿಗೆ ಮಾಹಿತಿ ನೀಡಿ ನಂತರ ಅವರು ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದರು.
ಸ್ಯಾಂಡಲ್ವುಡ್ನಲ್ಲಿ ಡ್ರಗ್ಸ್ ಸೇವಿಸುವ 10ರಿಂದ 15 ಮಂದಿ ಹೆಸರನ್ನು ಪೆÇಲೀಸರಿಗೆ ಸಾಕ್ಷಿ ಸಮೇತ ನೀಡಿದ್ದೇನೆಂದರು.
ಅವರ ಹೆಸರನ್ನು ಬಹಿರಂಗಪಡಿಸಲು ಸಾಧ್ಯವಿಲ್ಲ ಎಂದರು.
ಡ್ರಗ್ಸ್ ಸೇವನೆ ಮಾಡುವವರ ಹೆಸರು ಹೇಳುವ ಮೂಲಕ ಅವರಿಗೆ ತೊಂದರೆ ನೀಡಬೇಕು ಎಂಬುದು ನನ್ನ ಉದ್ದೇಶವಲ್ಲ. ಯುವ ನಟರು, ಮಕ್ಕಳು ಹಾಗೂ ವಿದ್ಯಾರ್ಥಿಗಳ ಭವಿಷ್ಯದ ದೃಷ್ಟಿಯಿಂದ ಇದರ ವಿರುದ್ಧ ಸೂಕ್ತಕ್ರಮ ಕೈಗೊಳ್ಳಲು ನಾನು ಡ್ರಗ್ಸ್ ಸೇವಿಸುವವರ ಹೆಸರು ಹೇಳಿದ್ದೇನೆಂದು ಅವರು ತಿಳಿಸಿದರು.
ಚಿರಂಜೀವಿ ಸರ್ಜಾ ಕುರಿತು ನಾನು ಆಡಿದ ಮಾತಿಗೆ ಕ್ಷಮೆಯಾಚಿಸುತ್ತೇನೆ ಎಂದು ಇಂದ್ರಜಿತ್ ಲಂಕೇಶ್ ಹೇಳಿದರು.
ಶೀಘ್ರದಲ್ಲೇ ಪೊಲೀಸರು ಡ್ರಗ್ಸ್ ಜಾಲವನ್ನು ಬೇಧಿಸುತ್ತಾರೆ ಎಂಬ ವಿಶ್ವಾಸ ನನಗಿದೆ ಎಂದು ಅವರು ತಿಳಿಸಿದರು.