ವರದಿ:ರಾಮಸಮುದ್ರ ಎಸ್.ವೀರಭದ್ರಸ್ವಾಮಿ
ಚಾಮರಾಜನಗರ: ಮತದಾನದಿಂದ ಹೊರಗುಳಿಯದೆ ಪ್ರತಿಯೊಬ್ಬರೂ ಮತದಾನ ಮಾಡಬೇಕು ಎಂದು ಜಿಲ್ಲಾಧಿಕಾರಿ ರಮೇಶ್ ಅವರು ಹೇಳಿದರು
ಭಾರತ ಚುನಾವಣಾ ಆಯೋಗದ ನಿರ್ದೇಶನದಂತೆ. 80+ ವಯೋಮಾನದ ಹಿರಿಯ ನಾಗರೀಕರ ಮತ್ತು ವಿಕಲಚೇತನ ಮತದಾರರಿಗೆ ಅವರು ಒಪ್ಪಿಗೆ ನೀಡಿದ್ದಲ್ಲಿ ಮನೆಯಿಂದಲೆ ಮತದಾನ ಮಾಡಲು ಇದೇ ಮೊದಲ ಬಾರಿಗೆ ಅವಕಾಶ ಕಲ್ಪಿಸಲಾಗಿದೆ. ಈ ಸಂಬಂಧ, ಚಾಮರಾಜನಗರ ಜಿಲ್ಲೆಯಲ್ಲಿ ಏಕ ಮಾದರಿಯಲ್ಲಿ ದಿನಾಂಕ : 29.04,2023 (ಶನಿವಾರ) ಮತ್ತು 30,04,2023 ನಿಗಧಿಪಡಿಸಲಾಗಿದೆ. (ಭಾನುವಾರ) ದಿನಗಳಂದು ಮತದಾನ ಪ್ರಕ್ರಿಯೆ ನಿಗದಿಪಡಿಸಲಾಗಿದೆ ಎಂದು ಪತ್ರಿಕಾಘೊಷ್ಟಿಯಲ್ಲಿ ವಿವರಿಸಿದರು.
ಸದರಿ ಮತದಾನ ಮಾಡಿಸಲು ಒಬ್ಬರು ಮೈಕ್ರೋ ಆಬ್ಸರ್‌ವರ್, ಒಬ್ಬರು ವಿಡಿಯೋಗಾಥರ್ ಹಾಗೂ ಇಬ್ಬರು ಪೋಲಿಂಗ್ ಅಧಿಕಾರಿಗಳನ್ನು ಒಳಗೊಂಡಂತೆ ಒಂದು ತಂಡವನ್ನು ರಚಿಸಲಾಗಿದೆ. ಸದರಿ ತಂಡದವರು ರೂಟ್ ಮ್ಯಾಪ್ ಅನ್ನು ಮುಂಚಿತವಾಗಿ ಸಿದ್ದಪಡಿಸಿಕೊಂಡು, ಸೆಕ್ಟರ್ ಅಧಿಕಾರಿಗಳ ವಾಹನದಲ್ಲಿ ರೂಟ್ ಮ್ಯಾಚ್‌ನಂತೆ ಚುನಾವಣಾ ಆಯೋಗದ ಸೂಚನೆಗಳನ್ವಯ ಮತದಾನ ಪ್ರಕ್ರಿಯೆ ಕೈಗೊಳ್ಳುತ್ತಾರೆ. ಹಾಗೂ ಸದರಿ ತಂಡದವರಿಗೆ ದಿನಾಂಕ : 27,42023 (ಗುರುವಾರ) ರಂದು ತರಬೇತಿ ಹಮ್ಮಿಕೊಳ್ಳಲಾಗಿರುತ್ತದೆ.
ಚಾಮರಾಜನಗರ ಜಿಲ್ಲೆಯಲ್ಲಿನ ಮತದಾರರ ಪಟ್ಟಿಯಲ್ಲಿ 80+ ವಯೋಮಾನದ 23301 ಜನ ಮತದಾರರು ಮತ್ತು 11977 ವಿಕಲಚೇತನ ಮತದಾರರುಗಳಿದ್ದು, ಎಲ್ಲಾ ಮತದಾರರಿಗೆ ಬಿ.ಎಲ್.ಒ. ಗಳ ಮುಖಾಂತರ ಶೇ. 100 ರಷ್ಟು 12 ಡಿ (ನಿಗದಿತ ಪ್ರಪತ್ರ) ಅನುಬಂಧವನ್ನು ತಲುಪಿಸಲಾಗಿದೆ. ಇದರಲ್ಲಿ ಕ್ರಮವಾಗಿ 222 ಮತ್ತು 197 ಮತದಾರರು ಮನೆಯಿಂದಲೇ ಮತ ಚಲಾಯಿಸಲು ಇಚ್ಚಿಸಿದ್ದು, ಇವರುಗಳಿಂದ ಸ್ವತಂತ್ರ ಮತ್ತು ನಿರ್ಭೀತರಾಗಿ ಮತ ಚಲಾಯಿಸಲು 26 ರೂಟ್‌ಗಳನ್ನು ಮಾಡಿ ವ್ಯವಸ್ಥೆ ಕಲ್ಪಿಸಲಾಗಿದೆ
ಚುನಾವಣೆ ಮತ್ತು ಇತರೆ ಅಗತ್ಯ ಸೇವೆಗಳಡಿಯಲ್ಲಿ ಕರ್ತವ್ಯ ನಿರ್ವಹಿಸುತ್ತಿರುವ, ಮತದಾನದ ಹಕ್ಕು ಹೊಂದಿರುವ ನೌಕರರು ಜಿಲ್ಲೆಯಾದ್ಯಂತ ಏಕ ಮಾದರಿಯಲ್ಲಿ ದಿನಾಂಕ : 12.05.2023 (ಮಂಗಳವಾರ), 03.05.2023 (ಬುಧವಾರ) ಮತ್ತು 14,05,2023 (ಗುರುವಾರ) ದಿನಗಳಂದು ಬೆಳಿಗ್ಗೆ 9.00 ಗಂಟೆಯಿಂದ ಸಂಜೆ 5.00 ಗಂಟೆಯವರೆಗೆ ಜೋಸ್ಟಲ್ ವೋಟಿಂಗ್ ಸೆಂಟರ್‌ನಲ್ಲಿ (PVC) ನಲ್ಲಿ ಮತದಾನವನ್ನು ಚುನಾವಣಾ ಆಯೋಗವು ನಿಗಧಿಪಡಿಸಿದ ಮಾರ್ಗಸೂಚಿಗಳನ್ವಯ ಮತದಾನ ಮಾಡಲು ಕ್ರಮ ವಹಿಸಲಾಗುತ್ತಿದೆ. ಇದರಲ್ಲಿ ವಿವಿಧ ಅಗತ್ಯ ಸೇವಾ ವರ್ಗದಡಿ 262 ಮಂದಿಯ ಪಟ್ಟಿ ಪಡೆದಿದ್ದು, ಮತ ಚಲಾಯಿಸಲು ಮೋಸ್ಟಲ್ ವೋಟಿಂಗ್ ಸೆಂಟರ್‌ನಲ್ಲಿ (PVC) ಅನ್ನು ವ್ಯವಸ್ಥೆ ಮಾಡಲಾಗಿರುತ್ತದೆ.
ಅಪರ ಜಿಲ್ಲಾದಿಕಾರಿ ಕಾತ್ಯಾಯಿನಿ ಹಾಜರಿದ್ದರು.