ಮೈಸೂರು: ಮೈಸೂರಿನ ಕೃಷ್ಣರಸಜ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಶ್ರೀವತ್ಸ ಅವರು ವಾರ್ಡ್ ನಂಬರ್ 50ರ ವ್ಯಾಪ್ತಿಯಲ್ಲಿ ಬಿರುಸಿನ ಮತಯಾಚನೆ ಮಾಡಿದರು.
ಬೆಳಗ್ಗೆ ಸುಣ್ಣದ ಕೇರಿಯಲ್ಲಿ ಇರುವ ಸಿದ್ದಪ್ಪಾಜಿ ದೇವಸ್ಥಾನದಲ್ಲಿ ಪೂಜೆ ಮಾಡಿಸಿ ಪಾದಯಾತ್ರೆಗೆ ಚಾಲನೆ ನೀಡಲಾಯಿತು.
ನಂತರ ಪ್ರತಿ ಮನೆಮನೆಗಳಿಗೂ ತೆರಳಿ ಅವರ ಕುಂದು ಕೊರತೆಗಳನ್ನು ಆಲಿಸಿದರು.ಜತೆಗೆ ಅದಕ್ಕೆ ಪರಿಹಾರ ಸೂಚಿಸಿದರು.
ರಾಜ್ಯ ಸರ್ಕಾರ ಮತ್ತು ಕೇಂದ್ರ ಸರ್ಕಾರ ಯೋಜನೆಗಳನ್ನು ಜನಸಾಮಾನ್ಯರಿಗೆ ಪ್ರಾಮಾಣಿಕವಾಗಿ ತಲುಪಿಸುವ ನಿಟ್ಟಿನಲ್ಲಿ ಪ್ರಾಮಾಣಿಕವಾಗಿ ಕೆಲಸ ಮಾಡುತ್ತೇನೆ ಎಂದು ಪ್ರತಿಯೊಬ್ಬ ಮತದಾರರನ್ನು ಭೇಟಿ ಮಾಡಿ ಕರಪತ್ರ ನೀಡಿ ತಮಗೇ ಮತ ನೀಡಬೇಕೆಂದು ಶ್ರೀವತ್ಸ ಮನವಿ ಮಾಡಿದರು.
ಈ ವೇಳೆ ಮಾತನಾಡಿದ ಶ್ರೀವತ್ಸ ಅವರು ಅತಿ ಹಿಂದುಳಿದ ಪ್ರದೇಶಗಳಾದ ಸುಣ್ಣದ ಕೇರಿ , ಕಾಕರವಾಡಿ, ಬೆಸ್ತರಗೇರಿ, ಕುಂಬಾರ ಗೇರಿ ಮೋಹಲ್ಲ ಗಳಲ್ಲಿ ಹಿಂದುಳಿದ ವರ್ಗದವರು ಅತಿ ಹೆಚ್ಚು ವಾಸಿಸುತ್ತಿದ್ದಾರೆ ಎಂದು ಹೇಳಿದರು.
ಇವರುಗಳಿಗೆ ಮೂಲಭೂತ ಸೌಕರ್ಯಗಳಾದ ಕುಡಿಯುವ ನೀರು, ಸ್ವಚ್ಛತೆ, ವಿದ್ಯುತ್, ರಸ್ತೆ, ಹಾಗೂ ಸರ್ಕಾರದ ಸವಲತ್ತುಗಳನ್ನು ಪ್ರಾಮಾಣಿಕವಾಗಿ ಕೊಡಿಸಲಾಗುವುದೆಂದು ತಿಳಿಸಿದರು.
ಶ್ರೀವತ್ಸ ಅವರೊಂದಿಗೆ ಮಹಾಪೌರರಾದ ಶಿವಕುಮಾರ್, ಹಿಂದುಳಿದ ವರ್ಗಗಳ ಮೋರ್ಚಾ ಅಧ್ಯಕ್ಷ ಜೋಗಿ ಮಂಜು, ಎಸ್.ಸಿ. ಮೋರ್ಚ ಪ್ರಧಾನ ಕಾರ್ಯದರ್ಶಿ ಕೃಷ್ಣ ನಾಯಕ್, ವಾರ್ಡಿನ ಅಧ್ಯಕ್ಷ ಮಂಜುನಾಥ್ ನಾಯಕ್, ಉಸ್ತುವಾರಿ ಅರುಣ್, ಕಾರ್ಯದರ್ಶಿ ಅರಸು, ಜೋಗಪ್ಪ ,ನಂದೀಶ್ ನಾಯಕ್, ಕೃಷ್ಣ, ಅನಿಲ್ ರಾಜ್, ಶರತ್ ಭಂಡಾರಿ, ಲಿಂಗರಾಜು, ಮಧು, ಲಕ್ಷ್ಮಕ್ಕ ,ವಿಜಯ ನಾಯಕ್, ಸಚಿನ್,ಎಳನೀರು ಕುಮಾರ್ ಮುಂತಾದವರು ಮತಪ್ರಚಾರದಲ್ಲಿ ಪಾಲ್ಗೊಂಡಿದ್ದರು.