ಕಾಂಗ್ರೆಸ್ ಮದ್ದೂರು ಸೆಟಲ್ ಟ್ರೈನ್ ನಂತಾಗಿದೆ‌ -ಶ್ರೀನಿವಾಸಪ್ರಸಾದ್ ವ್ಯಂಗ್ಯ

ಮೈಸೂರು: ಕಾಂಗ್ರೆಸ್ ಪಕ್ಷ ಈಗ ಮದ್ದೂರು ಸೆಟಲ್ ಟ್ರೈನ್ ನಂತಾಗಿದೆ‌ ಎಂದು ಸಂಸದ ಶ್ರೀನಿವಾಸ‌ ಪ್ರಸಾದ್ ವ್ಯಂಗ್ಯ ವಾಡಿದರು.

ಮೈಸೂರಿನಲ್ಲಿ ಗುರುವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದರು.

ಮದ್ದೂರು ಸೆಟಲ್ ಟ್ರೈನ್ ಎಂದರೇ ಗೊತ್ತಾ, ಅದು ಮದ್ದೂರು ಬಿಟ್ಟು ಯಾವಾಗ ಬೆಂಗಳೂರು ಸೇರುತ್ತೆ ಎಂಬುದೇ ಗೊತ್ತಾಗಲ್ಲ ಅದೇ ಪರಿಸ್ಥಿಯಲ್ಲಿ ಇಂದು ಕಾಂಗ್ರೆಸ್ ಇದೆ ಆದರೂ ಅಧಿಕಾರದ ಕನಸು ಕಾಣುತ್ತಿದ್ದಾರೆ ಎಂದು ಟೀಕಿಸಿದರು

ಒಬ್ಬರು 36 ಸಾವಿರ ಮತಗಳ ಅಂತರದಿಂದ ಇನ್ನೊಬ್ಬ ಮಹಾ ಪುರುಷ 29 ಸಾವಿರ ಮತಗಳ ಅಂತರದಿಂದ ಸೋತರು ಎಂದು ಸಿದ್ದು ಹಾಗೂ ಮಹದೇವಪ್ಪ ಅವರ ಹೆಸರೇಳದೆ ಶ್ರೀನಿವಾಸ್ ಪ್ರಸಾದ್ ಕಿಡಿಕಾರಿದರು.

ಸಿದ್ದರಾಮಯ್ಯ ಒಬ್ಬ ಮಾನಸಿಕ ರೋಗಿ, ದಡ್ಡ ಎಂದು ಇದೇ ವೇಳೆ ಅವರು ಟೀಕಿಸಿದರು.

ವರುಣದಲ್ಲಿ 1 ಲಕ್ಷ ಮತಗಳ ಅಂತರದಲ್ಲಿ ಗೆಲ್ಲುತ್ತೇನೆ ಎಂದು ಸಿದ್ದರಾಮಯ್ಯ ಹೇಳುತ್ತಾರೆ, ಅದು ಸಾಧ್ಯಾನಾ ಅಷ್ಟು ಮತಗಳ ಅಂತರ ಹೇಗೆ ಸಿಗುತ್ತೆ.

ಮುಖ್ಯಮಂತ್ರಿ, ವಿರೋಧ ಪಕ್ಷದ ನಾಯಕರಾಗಿದ್ದ ಸಿದ್ದರಾಮಯ್ಯ ಮಾತನಾಡುವ ಮೊದಲು ಸ್ವಲ್ಪ ಯೋಚನೆ ಮಾಡಿ ಮಾತನಾಡಬೇಕು ಎಂದು ಸಲಹೆ‌ ನೀಡಿದರು.

ಮೈಸೂರಿನ 11 ಕ್ಷೇತ್ರಗಳಲ್ಲಿ ನಾವು ಈ ಬಾರಿ ಹೆಚ್ಚಿನ ಸ್ಥಾನ ಗೆಲ್ಲುವ ವಿಶ್ವಾಸವಿದೆ ಎಂದು ಶ್ರೀನಿವಾಸಪ್ರಸಾದ್ ಹೇಳಿದರು

ಡಿಕೆಶಿ ರಕ್ತದಲ್ಲಿ ಬರೆದು ಕೊಡುತ್ತೇನೆ ಎನ್ನುತ್ತಾರೆ, ಒಂದು ರಾಷ್ಟ್ರೀಯ ಪಕ್ಷದ ರಾಜ್ಯದ ಅದ್ಯಕ್ಷರಾಗಿ ಮಾತನಾಡುವ ರೀತಿ ಇದೇನಾ ಎಂದು ಪ್ರಶ್ನಿಸಿದರು.

ಅಲ್ಲದೆ ಡಿಕೆಶಿ ಮೇಲೆ ಇಡಿ ಕತ್ತಿ ತೂಗಾಡುತ್ತಿದೆ ಯಾವಾಗ ಎಲ್ಲಿ ಏನಾಗುತ್ತೋ ಗೊತ್ತಿಲ್ಲ ಆರೂವರೆ ಸಾವಿರ ಕೋಟಿ ಒಡೆಯ ಮುಖ್ಯಮಂತ್ರಿ ಆಗಿ ಏನು ಆಡಳಿತ ಕೊಡುತ್ತಾರೆ ಎಂದು ಮಾರ್ಮಿಕವಾಗಿ ಪ್ರಶ್ನಿಸಿದರು.

ಉತ್ತರ ಪ್ರದೇಶದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಮಂಡ್ಯದಲ್ಲಿ ಡಬಲ್ ಇಂಜಿನ್ ಸರ್ಕಾರದ ಸಾಧನೆಗಳ ಬಗ್ಗೆ ಹೇಳಿದರು ಅದ್ಭುತವಾಗಿ ಮಾತನಾಡಿದರು ಶ್ರೀನಿವಾಸ ಪ್ರಸಾದ್ ಹೊಗಳಿದರು.

ಉತ್ತರ ಪ್ರದೇಶದಲ್ಲಿ ಅವರ ಕಾರ್ಯ ವೈಖರಿ ಚೆನ್ನಾಗಿದೆ, ಕಾನೂನು ಸುವ್ಯಸ್ಥೆಯನ್ನು ಬಹಳ ಅಚ್ಚುಕಟ್ಟಾಗಿ ನಿಭಯಿಸುತ್ತಿದ್ದಾರೆ ಎಂದು ಹೇಳಿದರು

ಬಸವರಾಜ್ ಬೊಮ್ಮಾಯಿ ಉತ್ತಮವಾಗಿ ಆಡಳಿತ ಕೊಟ್ಟಿದ್ದಾರೆ ಯಾವುದೇ ಸಮಸ್ಯೆಗಳು ಬಂದರು ಕೂಲ್ ಆಗಿ ಪರಿಹಾರ ನೀಡುತ್ತಾ ಅತ್ಯುತ್ತಮ ಬಜೆಟ್ ಮಂಡನೆ ಮಾಡಿದ್ದಾರೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.