ಮೈಸೂರು: ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯನವರು ಹತಾಶರಾಗಿ ಚುನಾವಣಾ ಸಂದರ್ಭದಲ್ಲಿ ಗಲಭೆ ಉಂಟಾಗುವ ವಾತಾವರಣ ಸೃಷ್ಟಿಸುತ್ತಿದ್ದಾರೆ ಎಂದು ಸಂಸದ ಪ್ರತಾಪ್ ಸಿಂಹ ಆರೋಪಿಸಿದರು.
ಮೈಸೂರಿನಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು,ವರುಣಾದಲ್ಲಿ ನಮ್ಮ ಪಕ್ಷದ ಕಾರ್ಯಕರ್ತನ ಮೇಲೆ ಹಲ್ಲೆ ನಡೆಸಲಾಗಿದೆ. ಇದು ಸರಿಯಲ್ಲ ಎಂದು ಖಂಡಿಸಿದರು.
ಸಿದ್ದರಾಮಯ್ಯನವರು ಸೋಲಿನ ಭಯದಿಂದ ಈ ರಿತಿಯ ಘಟನೆ ನಡೆಸುತ್ತಿದ್ದಾರೆಂದು ದೂರಿದರು.
ಶಾಂತಿಯುತ ಚುನಾವಣೆ ನಡೆಸುವ ಹಿನ್ನೆಯಲ್ಲಿ ನಾವು ಈ ಘಟನೆ ಕುರಿತು ಚುನಾವನಾ ಆಯೋಗಕ್ಕೆ ದೂರು ನೀಡಿದ್ದೇವೆ ಎಂದು ಹೇಳಿದರು.
ಮಲ್ಲಿಕಾರ್ಜುನ ಖರ್ಗೆ ಅವರ ಹೇಳಿಕೆಯನ್ನು ಬಿಜೆಪಿ ತೀವ್ರವಾಗಿ ಖಂಡಿಸುತ್ತದೆ. ಅವರೂ ಸಹ ಹತಾಶ ಭಾವನೆಯಿಂದ ದೇಶದ ಪ್ರಧಾನಿ ವಿರುದ್ಧ ಹೀಗೆಲ್ಲ ಮಾತನಾಡುತ್ತಿದ್ದಾರೆ ಎಂದು ಪ್ರತಾಪ್ ಸಿಂಹ ದೂರಿದರು.
ಖರ್ಗೆ ಒಬ್ಬ ಹಿರಿಯರು, ಉತ್ತಮ ಸ್ಥಾನದಲ್ಲಿದ್ದಾರೆ, ಈ ರೀತಿ ಮಾತನಾಡಿ ನೀವು ಇನ್ನೊಬ್ಬ ಸಿದ್ದರಾಮಯ್ಯ ಆಗಬೇಡಿ. ಸಿದ್ದರಾಮಯ್ಯನವರ ಛಾಳಿಗೆ ನೀವು ಅಂಟಿಕೊಳ್ಳಬೇಡಿ ಎಂದು ಪ್ರತಾಪ್ ಸಿಂಹ ಸಲಹೆ ನೀಡಿದರು.