ಉತ್ತರ ಭಾರತದ ಯಜಮಾನಿಕೆ ದಕ್ಷಿಣದ ಮೇಲೆ ಹೇರಿಕೆ -ವಿಶ್ವನಾಥ್

ಮೈಸೂರು: ಉತ್ತರ ಭಾರತದ ಬಲವಂತದ ಯಜಮಾನಿಕೆಯನ್ನು ದಕ್ಷಿಣ ಭಾರತದ ಮೇಲೆ ಹೇರಲಾಗುತ್ತಿದೆ ಎಂದು ವಿಧಾನ ಪರಿಷತ್ ಸದಸ್ಯ ಎಚ್.ವಿಶ್ವನಾಥ್ ಆರೋಪಿಸಿದರು.

ಮೈಸೂರು ಜಿಲ್ಲಾ ಪತ್ರಕರ್ತರ ಸಂಘದಲ್ಲಿ ಶನಿವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ದಕ್ಷಿಣದ ಹಣ ಉತ್ತರಕ್ಕೆ ಹರಿಯುತ್ತಿದೆ ಎಂದು ಟೀಕಿಸಿದರು.

ನಮ್ಮ ರಾಜ್ಯಕ್ಕೆ ಕೊಡಬೇಕಾದ ಜಿಎಸ್ ಟಿ ಹಣವನ್ನು ಬಿಜೆಪಿ ನಾಯಕರು ತರುವಲ್ಲಿ ವಿಫಲರಾಗಿದ್ದಾರೆ ಎಂದು ದೂರಿದರು.

ರಾಜ್ಯದಲ್ಲಿ ಈ ಬಾರಿ ಬಿಜೆಪಿ ಯಾವುದೇ ಕಾರಣಕ್ಕೂ ತನ್ನ ತತ್ವ ಸಿದ್ಧಾಂತದ ಮೇಲೆ ಅಧಿಕಾರಕ್ಕೆ ಬರುವುದಿಲ್ಲ ಎಂದು ವಿಶ್ವನಾಥ್ ಹೇಳಿದರು.

ಈ ಚುನಾವಣೆಯಲ್ಲಿ ಬಿಜೆಪಿ ಈಗ ಏನು ಮಾಡಿದೆ. ಮುಂದೆ ಏನು ಮಾಡುತ್ತೇವೆ ಎಂಬುದನ್ನು ಹೇಳುತ್ತಲೇ ಇಲ್ಲ ಹಾಗಾಗಿ ಬಿಜೆಪಿ ಅಧಿಕಾರಕ್ಕೆ ಬರುವುದಿಲ್ಲ ಎಂದು ಭವಿಷ್ಯ ನುಡಿದರು.

ಪ್ರಧಾನಿ ಮೋದಿ ಅವರೇ ರಾಜ್ಯ ಬಿಜೆಪಿಗೆ ಚಾರಿತ್ರ್ಯಾರ್ಹ ಭ್ರಷ್ಟಾಚಾರ ಅಂಟಿಕೊಂಡಿದೆ ಮೊದಲು ಅದನ್ನು ಸಂಪೂರ್ಣವಾಗಿ ಸ್ವಚ್ಛ ಮಾಡಿ ಎಂದು ವಿಶ್ವನಾಥ್ ಸಲಹೆ ನೀಡಿದರು.

ರಾಜ್ಯದಲ್ಲಿ ಒಂದೇ ಪಕ್ಷವನ್ನು ಅಧಿಕಾರಕ್ಕೆ ತರಬೇಕೆಂದು ಇದೇ ವೇಳೆ ವಿಶ್ವನಾಥ್ ರಾಜ್ಯದ ಮತದಾರರಲ್ಲಿ ಮನವಿ ಮಾಡಿದರು.

ರಾಜ್ಯದ ಪ್ರತಿಯೊಬ್ಬ ಮತದಾರನು ತನ್ನ ಮತ ಚಲಾಯಿಸಬೇಕು ಎಂದು ಹೇಳಿದರು.