ವಿಜಯನಗರ: ಕಾಂಗ್ರೆಸ್ ಅಭ್ಯರ್ಥಿ ಪರ ಪ್ರಚಾರಕ್ಕೆ ಬಂದಿದ್ದ ವೇಳೆ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಅವರು ಇದ್ದಕ್ಕಿದ್ದಂತೆ ಅಸ್ವಸ್ಥಗೊಂಡು ಕುಸಿದುಬಿದ್ದ ಘಟನೆ ನಡೆಯಿತು.
ವಿಜಯನಗರ ಜಿಲ್ಲೆ ಕೂಡ್ಲಿಗಿಯಲ್ಲಿ ಶನಿವಾರ ಬೆಳಿಗ್ಗೆ ಸಿದ್ದು ಪ್ರಚಾರಕಾರ್ಯಕ್ಕೆ ಬಂದಿದ್ದರು
ಕಾರಿನ ಡೋರ್ ತೆಗೆದು ನಿಂತು ಜನರತ್ತ ಕೈಬೀಸುತ್ತಿದ್ದಾಗಲೇ ಸಿದ್ದುಗೆ ಅಸ್ವಸ್ಥತೆ ಕಾಡಿತು.ಕಾರಿನ ಬಾಗಿಲಲ್ಲೇ ಸಿದ್ದು ಕುಸಿದು ಬಿದ್ದರು.
ತಕ್ಷಣ ಅವರಿಗೆ ಕಾರಿನಲ್ಲೇ ಗ್ಲೂಕೋಸ್ ನೀಡಲಾಗಿದ್ದು ನಂತರ ಚೇತರಿಸಿಕೊಂಡರು.
ವೈದ್ಯರ ಸಲಹೆ ಮೇರೆಗೆ ಸಿದ್ದು ಸಧ್ಯವಿಶ್ರಾಂತಿ ತೆಗೆದುಕೊಳ್ಳಬೇಕಾಗಿದೆ.