ಮೈಸೂರು: ವರುಣ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ವಿ ಸೋಮಣ್ಣ ಅವರ ಪರವಾಗಿ ನಾಯಕ ನಟ ಹಾಗೂ ರಾಜ್ಯಸಭಾ ಸದಸ್ಯ ಜಗ್ಗೇಶ್ ಅವರು ಮತಪ್ರಚಾರ ಮಾಡಿದರು.
ಕೆಂಪನ ಹುಂಡಿ ಹಾಗೂ ರಂಗಸಮುದ್ರ ಸುತ್ತಮುತ್ತಲಿನ ಗ್ರಾಮಗಳಲ್ಲಿ ಮತದಾರರನ್ನು ಭೇಟಿ ಮಾಡಿ ಮತಯಾಚನೆ ಮಾಡಿದರು.
ಈ ಸಂದರ್ಭದಲ್ಲಿ ಮಾತನಾಡಿದ ಜಗ್ಗೇಶ್, ಸಿದ್ದರಾಮಯ್ಯನವರು ಪ್ರತಿನಿಧಿಸಿದ್ದ ವರುಣ ವಿಧಾನಸಭಾ ಕ್ಷೇತ್ರ ಮೈಸೂರು ಜಿಲ್ಲೆಯಲ್ಲೇ ಅತಿ ಹಿಂದುಳಿದ ಕ್ಷೇತ್ರವಾಗಿದೆ ಎಂದು ಆರೋಪಿಸಿದರು.
ಮುಖ್ಯಮಂತ್ರಿಯಾಗಿದ್ದ ಸಂದರ್ಭದಲ್ಲಿ ವರುಣ ಕ್ಷೇತ್ರದ ಅಭಿವೃದ್ಧಿಗೆ ಯಾವುದೇ ಕಾರ್ಯವನ್ನು ಮಾಡದೆ ಇಡೀ ವರುಣವನ್ನು ಅನಾಥವನ್ನಾಗಿ ಮಾಡಿದ್ದಾರೆ.
ಯಾವುದೇ ಶಾಲಾ-ಕಾಲೇಜುಗಳು, ಸುಸಜ್ಜಿತ ಹಾಸ್ಪಿಟಲ್, ಕಾರ್ಖಾನೆಗಳು, ಸರ್ಕಾರಿ ಕಚೇರಿಗಳು ನಿರ್ಮಾಣ ಮಾಡಲು ಕೂಡ ಇವರಿಗೆ ಸಾಧ್ಯವಾಗಿಲ್ಲ ಎಂದು ಟೀಕಿಸಿದರು.
ಮುಖ್ಯಮಂತ್ರಿ ಆಗಿದ್ದಾಗಲೇ ಈ ಕ್ಷೇತ್ರಕ್ಕೆ ಏನನ್ನು ಮಾಡದ ಸಿದ್ದರಾಮಯ್ಯನವರು ಮುಂದೆ ಯಾವ ಅಭಿವೃದ್ಧಿಯನ್ನು ಮಾಡಲು ಸಾಧ್ಯ ಹಾಗಾಗಿ ಮತದಾರರು ವಿ. ಸೋಮಣ್ಣನವರಿಗೆ ಅಮೂಲ್ಯ ಮತವನ್ನು ನೀಡಿ ಗೆಲ್ಲಿಸಿ ಕೊಡಬೇಕೆಂದು ಮನವಿ ಮಾಡಿದರು.
ಮುಖಂಡರಾದ ಚಿನ್ನಂಬಳ್ಳಿ ಮಂಜು, ವಿಜಯಕುಮಾರ್, ಮಲ್ಲೇಶ್, ಶಿವಪ್ರಕಾಶ್ ಹಾಗೂ ಊರಿನ ಮುಖಂಡರುಗಳು ಜಗ್ಗೇಶ್ ಗೆ ಸಾತ್ ನೀಡಿದರು.