ನನ್ನ ವರ್ಚಸ್ಸು ಕಡಿಮೆ ಆಗಿಲ್ಲ -ಶೆಟ್ಟರ್

ಹುಬ್ಬಳ್ಳಿ: ಕಾಂಗ್ರೆಸ್ ಪಕ್ಷ ಎಲ್ಲೆಲ್ಲಿ ನನಗೆ ಪ್ರಚಾರಕ್ಕೆ ಕಳಿಸ್ತಾರೆ ಅಲ್ಲಿ ಪ್ರಚಾರ ಮಾಡತ್ತೇನೆ. ನನ್ನ ಪರವಾಗಿ ಸ್ಟಾರ್ ಪ್ರಚಾರಕರು ಬಂದು ಕ್ಯಾಂಪೇನ್ ಮಾಡತ್ತಾರೆ ಎಂದು ಮಾಜಿ ಸಿಎಂ ಜಗದೀಶ್ ಶೆಟ್ಟರ್ ಹೇಳಿದರು.

ಹುಬ್ಬಳ್ಳಿಯ ನಿವಾಸದಲ್ಲಿ ಮಾತನಾಡಿದ ಅವರು, ಸರ್ವೇ ಯಾವುದೇ ಬರಲಿ, ಅಧಿಕಾರ ಮಾತ್ರ ಬಿಜೆಪಿಗೆ ಎಂಬ ಬಿ.ಎಲ್.ಸಂತೋಷ ಹೇಳಿಕೆ ವಿಚಾರಕ್ಕೆ ಪ್ರತಿಕ್ರಿಯಿಸಿ ಅದೊಂದು ರಾಜಕೀಯವಾದ ಹೇಳಿಕೆ ಎಂದು ಹೇಳಿದರು.

ಹು-ಧಾ ಸೆಂಟ್ರಲ್ ಕ್ಷೇತ್ರದಲ್ಲಿ ನನ್ನ ವರ್ಚಸ್ಸು ಕಡಿಮೆ ಆಗಿಲ್ಲ. ಯಾವುದೇ ಒಂದು ಕಪ್ಪು ಚುಕ್ಕೆ ಇಲ್ಲದ ರಾಜಕಾರಣ ಮಾಡಿದ್ದೇನೆ. ಜನರ ಮನಸ್ಸಿನಲ್ಲಿ ನನ್ನ ಬಗ್ಗೆ ಅನುಕಂಪ ಇದೆ ಎಂದು ತಿಳಿಸಿದರು.

ಏನೂ ತಪ್ಪು ಮಾಡದವರಿಗೆ ಟಿಕೆಟ್ ಏಕೆ ಕೈತಪ್ಪಿಸಿದ್ದಾರೆಂಬ ಪ್ರಶ್ನೆ ಇದೆ. ಜನರ ಸಿಂಪತಿ, ಬೇಸರ ಇರುವುದರಿಂದ ಶೆಟ್ಟರ್ ಅವರನ್ನು ಆರಿಸಿ ತರಬೇಕೆಂಬ ಛಲ ತೊಟ್ಟಿದ್ದಾರೆ. ಹಿಂದಿನ ಚುನಾವಣೆಗಿಂತ ಈ ಬಾರಿ ಹೆಚ್ಚು ಮತ ಪಡೆದು ಆರಿಸಿ ಬರುತ್ತೇ‌ನೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.

ಬಿಜೆಪಿ ಪದಾಧಿಕಾರಿಗಳು ಮೊದಲೇ ರಾಜೀನಾಮೆ ಕೊಟ್ಟಿದ್ದಾರೆ. ಅವರನ್ನು ಪುನಃ ಉಚ್ಚಾಟನೆ ಮಾಡುವುದು ಆಸ್ಯಾಸ್ಪದ ಎಂದು ಪ್ರಶ್ನೆಯೊಂದಕ್ಕೆ ಶೆಟ್ಟರ್ ಉತ್ತರಿಸಿದರು.

ಈ ಒತ್ತಡ ಬಹಳ ದಿನ ನಡೆಯೋದಿಲ್ಲ. ಈಗಾಗಲೇ ಡ್ಯಾಂ ಒಡೆದು ಹೋಗಿದೆ. ರಾಜಕಾರಣದಲ್ಲಿ ಒಳ ಹೊಡೆತ, ಹೊರ ಒಡೆತ ಎಂಬುದಿದೆ. ಈಗಾಗಲೇ ಕಾರ್ಯಕರ್ತರು ಒಳ ಹೊಡೆತ ಶುರು ಮಾಡಿದ್ದಾರೆ ಎಂದರು.

ಸೆಂಟ್ರಲ್ ಕ್ಷೇತ್ರದಲ್ಲಿ ಬಿಜೆಪಿ ಅಭ್ಯರ್ಥಿ ಗೆಲ್ಲುವ ಅಮಿತ್ ಶಾ ಹೇಳಿಕೆ ವಿಚಾರ, ಯಾರು ಏನೇ ಹೇಳಿದರೂ ಅತಿಹೆಚ್ಚು ಮತಗಳಿಂದ ಗೆದ್ದು ಬರುತ್ತೇನೆ ಎಂದು ಟಾಂಗ್ ನೀಡಿದರು.

ಜಗದೀಶ್ ಶೆಟ್ಟರ್ ಸೋಲಿಸುವ ವಿಚಾರವಾಗಿ ಹೈಕಮಾಂಡ್ ಜೋಶಿಗೆ ಟಾಸ್ಕ್ ಕೊಟ್ಟಿದೆಯಲ್ಲಾ ಎಂಬ ಪ್ರಶ್ನೆಗೆ

ಇಷ್ಟು ದಿನ ಜೋಶಿ ಅವರು ಯಾವತ್ತೂ ಈ ಕ್ಷೇತ್ರದಲ್ಲಿ ಇಷ್ಟು ಕ್ಯಾಂಪ್ ಮಾಡಿರಲಿಲ್ಲ. ಅವರ ಮೇಲೆ ಕೇಂದ್ರದ ಒತ್ತಡ ಇದ್ದೆ ಇದೆ ಎಂದು ಹೇಳಿದರು.

ಸೋಲುವ ಭಯದಲ್ಲಿ ಜನರಿಗೆ ಹೆದರಿಕೆ, ದಬ್ಬಾಳಿಕೆ ಹಾಕುವುದು ಪ್ರಾರಂಭ ಆಗಿದೆ. ಮುಂದೆ 2024 ಲೋಕಸಭಾ ಚುನಾವಣೆ ಬರುತ್ತದೆ ಕಾದು ನೋಡಿ ಎಂದು ಮಾರ್ಮಿಕವಾಗಿ ಶೆಟ್ಟರ್ ನುಡಿದರು.

ಬೊಮ್ಮಾಯಿ ಕ್ಯಾಬಿನೆಟ್ ನಲ್ಲಿ ಶೆಟ್ಟರ್ ಮಂತ್ರಿ ಸ್ಥಾನ ಬೇಡಾ ಎಂದಿದ್ದಕ್ಕೆ ಟಿಕೆಟ್ ಕೊಡಲಿಲ್ಲ ಎಂಬ ಅಮಿತ್ ಶಾ ಹೇಳಿಕೆ ವಿಚಾರ, ಕ್ಯಾಬಿನೆಟ್ ನಲ್ಲಿ ಮಿನಿಸ್ಟರ್ ಆಗಲಿಲ್ಲ, ಅಂದರೆ ಎಮ್ ಎಲ್ ಎ ಟಿಕೆಟ್ ಕೊಡುವುದಿಲ್ಲ ಎಂಬುದು ಸರಿಯಲ್ಲ, ಇದು ವಿಚಿತ್ರ ಹೇಳಿಕೆ ಎಂದರು.